Sunday, December 22, 2024

ಯುವ ಮತದಾರರು ಕಾಂಗ್ರೆಸ್ ಪರ ಇದ್ದಾರೆ : ಶರಣ ಪ್ರಕಾಶ್ ಪಾಟೀಲ್

ಶಿವಮೊಗ್ಗ : ಯುವ ಮತದಾರರು ಕಾಂಗ್ರೆಸ್​​​ ಪಕ್ಷದ ಪರವಾಗಿದ್ದಾರೆ ಎಂದು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರ ಹೇಳಿದಂತೆ ಇಂದು ಗ್ಯಾರಂಟಿಗೆ ಚಾಲನೆ ನೀಡಿದೆ. ಯುವ ನಿಧಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಎಂದು ತಿಳಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಇತಿಹಾಸ ನಿರ್ಮಾಣ ಆಗಿದೆ. ಸ್ವಾಮಿ ವಿವೇಕಾನಂದರ ಜನ್ಮದಿನಂದು ಹೋರಾಟದ ನೆಲದಲ್ಲಿ ನಮ್ಮ ಯುವನಿಧಿ ಜಾರಿ ಆಗಿದೆ. ಯುವಕರಿಗೆ ವಿಶ್ವಾಸ ಮೂಡಿಸುವ ಜೊತೆಗೆ ಯುವಕರ ಕೈ ಹಿಡಿಯುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಫ್ರೀಡಂ ಪಾರ್ಕ್​ಗೆ ಅಲ್ಲಮಪ್ರಭು ಹೆಸರು

ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದೆ, ಇದು ನನ್ನ ಪುಣ್ಯ. ಆರ್ಥಿಕವಾಗಿ ಸಹಕಾರ ಆಗಲಿ ಎಂದು ಗೃಹಲಕ್ಷ್ಮೀ ಯೋಜನೆ ಕೊಟ್ಟಿದ್ದೇವೆ. ಒಂದು ಕೋಟಿಗೂ ಹೆಚ್ಚು ಮನೆಗೆ ಬೆಳಕಿನ ಭಾಗ್ಯ ನಮ್ಮ ಸರ್ಕಾರ ಕೊಟ್ಟಿದೆ. ಫ್ರೀಡಂ ಪಾರ್ಕ್​ಗೆ ಅಲ್ಲಮಪ್ರಭು ಹೆಸರು ಇಡಬೇಕು. ಶರಾವತಿ ಸಂತ್ರಸ್ತರ ಸಮಸ್ಯೆ ಸರ್ಕಾರ ಬಗೆಹರಿಸಬೇಕು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES