Friday, November 22, 2024

ರಾಮಮಂದಿರ ನಿರ್ಮಾಣದಿಂದ ಭಿಕ್ಷುಕರು ಹುಟ್ಟುತ್ತಾರೆ : ನಾಲಗೆ ಹರಿಬಿಟ್ಟ ಮಹೇಶ್ ಚಂದ್ರಗುರು

ಬೆಂಗಳೂರು : ಅಯೋಧ್ಯೆ ರಾಮಮಂದಿರ ನಿರ್ಮಾಣದಿಂದ ಭಿಕ್ಷುಕರ ಸೃಷ್ಟಿಯಾಗುತ್ತದೆ ಎಂದು ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರಗುರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಅಪಸ್ವರ’ದ ಕುರಿತು ಪವರ್ ಟಿವಿಯೊಂದಿಗೆ ಮಾತನಾಡಿರುವ ಅವರು, ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಅಲ್ಲಿ ಭಿಕ್ಷುಕರು ಹುಟ್ಟುತ್ತಾರೆ ಎಂದು ಹೇಳಿದ್ದಾರೆ.

ರಾಮನನ್ನು ಆರಾಧಿಸಿ, ನಮಗೆ ದುಃಖವಿಲ್ಲ. ರಾಮನ ಹೆಸರಲ್ಲಿ ದೇಶ ವಿಭಜನೆ ಮಾಡುತ್ತಿದ್ದಾರೆ. ಇದೇ ನಮಗೆ ದುಃಖ ತಂದಿದೆ. ಇವ್ರು ಮೂಲ ನಿವಾಸಿಗಳನ್ನು ತುಳಿಯುತ್ತಿದ್ದಾರೆ. 2024ರಲ್ಲಿ ದೇಶದ ಜನತೆ ಪ್ರಧಾನಿ ಮೋದಿಯವರಿಗೆ ಸರ್ಟಿಫಿಕೇಟ್ ಕೊಡುತ್ತಾರೆ, ನೀವು ಕಾಯಿರಿ ಎಂದು ತಿಳಿಸಿದ್ದಾರೆ.

ನಮಗೆ ಶ್ರೀರಾಮ ಸಮಸ್ಯೆಯಲ್ಲ

ನಿಮ್ಮ ಸಮಸ್ಯೆ ರಾಮನಾ? ಮೋದಿನಾ? ಎಂಬ ಪ್ರಶ್ನೆಗೆ, ನಮಗೆ ಮೋದಿನೂ ಸಮಸ್ಯೆಯಲ್ಲ, ಶ್ರೀರಾಮನೂ ಸಮಸ್ಯೆಯಲ್ಲ. ಪ್ರಧಾನಿ ಮೋದಿಗೂ ಒಂದೇ ಮತ, ಮಹೇಶ್ ಚಂದ್ರಗುರುಗೂ ಒಂದೇ ಮತ. ಸಂವಿಧಾನ ಹಾಗೂ ಸಮಾಜ ನನ್ನ ನಂಬಿಕೆ. ನನಗೆ ರಾಜಕಾರಣಿಗಳ ಸಹವಾಸವಿಲ್ಲ, ಅವರ ಸಹವಾಸ ನನಗೆ ಬೇಕಾಗಿಲ್ಲ. ನಾನು ಸ್ವಾರ್ಥ ಬಿಟ್ಟು ಬದುಕುತ್ತಿದ್ದೇನೆ ಎಂದು ಮಹೇಶ್ ಚಂದ್ರಗುರು ಹೇಳಿದ್ದಾರೆ.

ನಾನು ದೇಶಕ್ಕೆ ತೆರಿಗೆ ಕಟ್ಟುತ್ತಿದ್ದೇನೆ

ನಮ್ಮ ರಾಮ ನಿಮ್ಮಂತ ಪಾಪಿಯಲ್ಲ, ನಿಮ್ಮಂಥ ಪಾಪಿಗೆ ಒಂದು ಅರಮನೆ ಬೇಕಿದ್ದರೆ, ಇಡೀ ದೇಶದ ಆರಾಧ್ಯ ದೈವ ಶ್ರೀರಾಮನಿಗೆ ಮಂದಿರ ಬೇಡವೇ? ಎಂಬ ಪ್ರಶ್ನೆಗೆ, ನಾನು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅನುಯಾಯಿ. ನಾನು ದೇಶಕ್ಕೆ ತೆರಿಗೆ ಕಟ್ಟುತ್ತಿದ್ದೇನೆ ಎಂದು ಜಾರಿಕೆಯ ಉತ್ತರ ನೀಡಿದರು.

RELATED ARTICLES

Related Articles

TRENDING ARTICLES