Wednesday, January 22, 2025

‘ಕಾಟೇರ’ ಹವಾ.. 2 ವಾರಕ್ಕೆ 157 ಕೋಟಿ ರೂ. ಕಲೆಕ್ಷನ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಈಗಲೂ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಕಾಟೇರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಗಳಿಕೆ ಮಾಡುತ್ತಿದೆ. ಕಾಟೇರ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಜನ ಮೆಚ್ಚಿಕೊಂಡರು. ದರ್ಶನ್ ನಟನೆ, ಚಿತ್ರದ ಕಥೆ ಹಾಗೂ ತರುಣ್ ಸುಧೀರ್ ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದರು.

ಈ ಚಿತ್ರ ಎರಡು ವಾರಕ್ಕೆ ಬರೋಬ್ಬರಿ 157.42 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚುವುದರಿಂದ ಗಳಿಕೆ ಸ್ವಲ್ಪ ಇಳಿಕೆ ಕಾಣಬಹುದು ಎಂದು ಊಹಿಸಲಾಗಿದೆ. ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ದರ್ಶನ್ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ.

416 ಥಿಯೇಟರ್, 72 ಮಲ್ಟಿಫ್ಲೆಕ್ಸ್

ಮೂರನೇ ವಾರದಲ್ಲಿ ಒಟ್ಟು 416 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್​ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ, ಹೊಸ ದಾಖಲೆ ಬರೆಯುತ್ತಿದೆ. ಅಲ್ಲದೆ, ಈ ವಾರ ರಿಲೀಸ್ ಆಗಿರುವ ಪರಭಾಷಾ ಚಿತ್ರಗಳಿಗೆ ಕಾಟೇರ ಭಾರಿ ಸೆಡ್ಡು ಹೊಡೆದಿದ್ದಾನೆ.

RELATED ARTICLES

Related Articles

TRENDING ARTICLES