Sunday, December 22, 2024

ಭ್ರಷ್ಟಾಚಾರದಲ್ಲಿ ನಾವೇ ನಂ.1 ಅಂತ ಜಾಹೀರಾತು ಕೊಡಿ : ಸಿ.ಟಿ. ರವಿ

ಬೆಂಗಳೂರು : ಭ್ರಷ್ಟಾಚಾರದಲ್ಲಿ ‌ನಾವೇ ನಂಬರ್‌ 1 ಅಂತ‌ ಜಾಹೀರಾತು ಕೊಡಿ ಎಂದು ಕಾಂಗ್ರೆಸ್​ ನಾಯಕರಿಗೆ ಸಿ.ಟಿ. ರವಿ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾಹೀರಾತು‌ ನೀಡುತ್ತಿರುವುದರಿಂದ ಮಾಧ್ಯಮಗಳ ಸಹಕಾರ ಸಿಗುತ್ತಿದೆ. ಐದನೇ‌ ಗ್ಯಾರಂಟಿ ಯುವನಿಧಿ‌ ಕೊಡುತ್ತಿದ್ದೀರಿ ಅಷ್ಟೇ ಎಂದು ಹೇಳಿದ್ದಾರೆ.

ಯುವನಿಧಿ ಎಲ್ಲಾ ನಿರುದ್ಯೋಗಿಗಳಿಗಲ್ಲ. ನುಡಿದಂತೆ‌ ನಡೆದಿದ್ದೇವೆ ಅನ್ನೋದು‌ ಈಡೇರಿಲ್ಲ. ಸ್ಟಾಂಪ್‌ ಡ್ಯೂಟಿ,‌ ಅಬಕಾರಿ ತೆರಿಗೆ,‌ ಪೆಟ್ರೋಲ್‌, ಡೀಸೆಲ್‌ ಮೇಲೆ ಏರಿಕೆಯಾಗಿದೆ. ಇನ್ನು ವಿದ್ಯುತ್ ಬಿಲ್‌ ಏರಿಕೆ‌ ಮಾಡಿದ್ದು 7ನೇ ಗ್ಯಾರಂಟಿ ಎಂದು ಚಾಟಿ ಬೀಸಿದ್ದಾರೆ.

ಈ ಸುದ್ದಿ ಓದಿದ್ದಿರಾ? : ಅಯೋಧ್ಯೆಗೆ ಹೋಗಿ ರಾಮಮಂದಿರಕ್ಕೂ ಭೇಟಿ ನೀಡುತ್ತೇನೆ : ಸಿದ್ದರಾಮಯ್ಯ

ವರ್ಗಾವಣೆ ಭಾಗ್ಯ 11ನೇ ಗ್ಯಾರಂಟಿ

ನೀವು‌ ಜಾತಿ ಜಾತಿ‌ಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ. ‌ಇದು 9ನೇ‌ ಗ್ಯಾರಂಟಿಯಾಗಿದೆ. ಮಾಲೂರು ಶಾಸಕ‌ ಹರಾಜು‌ ಹಾಕಿ‌ 30 ಲಕ್ಷಕ್ಕೆ ಹುದ್ದೆ ಮಾರಿದ್ದಾರೆ‌, ಇದು 10ನೇ ಗ್ಯಾರಂಟಿ. ವರ್ಗಾವಣೆ ಭಾಗ್ಯ 11ನೇ ಗ್ಯಾರಂಟಿ ಎಂದು ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES