Thursday, December 26, 2024

ಕಾಂಗ್ರೆಸ್​ನವರದ್ದು ನೀಚ ಬುದ್ಧಿಯ ರಾಜಕಾರಣ: ಶ್ರೀರಾಮುಲು

ವಿಜಯನಗರ: ಕಾಂಗ್ರೆಸ್​ನವರು ನೀಚ ಬುದ್ದಿಯ ರಾಜಕಾರಣ ಮಾಡುತ್ತಾರೆ ಎಂದು ಕಾಂಗ್ರೆಸ್​​​​ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಿಲ್ಲಿಯಿಂದ ಹಳ್ಳಿಯವರಗೆ ನೀಚ ರಾಜಕಾರಣದಲ್ಲಿ ಕಾಂಗ್ರೆಸ್​​ನವರು ತೊಡಗಿದ್ದಾರೆ.

ದೇಶದ ಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಹಿಂದೂಗಳ ಆದರ್ಶ ಪುರುಷ ಶ್ರೀರಾಮನ ಬಗ್ಗೆ ಕಿಂಚೊತ್ತು ಮರ್ಯಾದೇ ನೀಡದ ಕಾಂಗ್ರೆಸ್, ಶ್ರೀರಾಮನ ದೇವಸ್ಥಾನದ ಉದ್ಘಾಟನೆಗೆ ಬರುವುದಿಲ್ಲ, ಯಾವುದೇ ರೀತಿಯ ದೇಣಿಗೆಯನ್ನು ನೀಡುವುದಿಲ್ಲ ಎಂದು ಹೇಳಿರುವುದು ನೋಡಿದರೆ, ಕಾಂಗ್ರೆಸ್ ಹಿಂದು ವಿರೋಧಿಗಳು ಎನ್ನುವುದು ಮತ್ತೊಮ್ಮೆ ಪ್ರೂ ಆಗಿದೆ ಎಂದಿದ್ಧಾರೆ.

ಇದನ್ನೂ ಓದಿ: ಯುವ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ

ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್​ನವರು, ಡೋಂಗಿ ಜಾತ್ಯಾತೀತತೆಯನ್ನು ಪ್ರದರ್ಶಿಸುತ್ತಾರೆ, ನೆಹರು ಕಾಲದಿಂದ ಇಂದಿನ ರಾಹುಲ್ ಗಾಂಧಿಯ ಕಾಲದವರಗೆ ಒಲೈಕೆ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ, ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಒಲೈಕೆ ರಾಜಕಾರಣ ಬಿಟ್ಟರೇ ಬೇರೆ ದಾರಿಯಿಲ್ಲ ಎಂದರು.

RELATED ARTICLES

Related Articles

TRENDING ARTICLES