Sunday, December 22, 2024

ಕಾರು ಅಪಘಾತ : ಬರ್ತ್​ಡೇ ಬಾಯ್ ಸೇರಿ ಇಬ್ಬರು ಸ್ಥಳದಲ್ಲೇ ಸಾವು

ಹಾಸನ : ಬರ್ತ್‌ ಡೇ ಸೆಲೆಬ್ರೇಷನ್‌ ಬಳಿಕ ಜಾಲಿ ಡ್ರೈವ್​​ ಹೋಗುವಾಗ ಕಾರು ಅಪಘಾತ ಸಂಭವಿಸಿದ್ದು, ಬರ್ಡ್​​ಡೇ ಬಾಯ್ ಸೇರಿ ಇನ್ನೋರ್ವ ಯುವಕ ಸಾವನ್ನಪಿದ್ದಾನೆ.

ಹಾಸನ ತಾಲೂಕಿನ ಮಡೆನೂರು ಫ್ರೈ ಓವರ್ ಬಳಿ ಈ ಘಟನೆ ನಡೆದಿದೆ. ಹುಟ್ಟುಹಬ್ಬ ಆಚರಣೆಗೆ ಬಂದಿದ್ದ ಚನ್ನರಾಯಪಟ್ಟಣ ಮೂಲದ ಯುವಕರು, ಗಿರೀಶ್ ಎಂಬುವವರಿಂದ ಕಾರು ಪಡೆದು ಕಳೆದ ರಾತ್ರಿ ಫ್ಲೈಓವರ್ ಮೇಲೆ ರಕ್ಷಿತ್ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದರು.

ಬಳಿಕ ಕಾರಿನಲ್ಲಿ ಹಾಸನದ ಕಡೆಗೆ ಜಾಲಿ ಡ್ರೈವ್ ಬರುತ್ತಿದ್ದ ಯುವಕರು ಚಾಲಕನ ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯ ಜಮೀನಿಗೆ ಕಾರು ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ರಕ್ಷಿತ್, ಕುಶಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಅಭಿಷೇಕ್, ನಿಶಾಂತ್, ಮಂಜುನಾಥ್‌ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಸಂಬಂಧ ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES