Sunday, December 22, 2024

ಬಾಗಿಲಿಗೆ ಬಂತು ಸರ್ಕಾರ, ಲಂಚ ರೆಡಿ ಇಟ್ಕೊಳಿ : ಶಾಸಕ ಯತ್ನಾಳ್

ವಿಜಯಪುರ : ಮನೆ ಬಾಗಿಲಿಗೆ ಬಂತು ಕಾಂಗ್ರೆಸ್​ ಸರ್ಕಾರ. ಲಂಚ ರೆಡಿ ಮಾಡಿ ಇಟ್ಕೊಳಿ, ರೇಟ್ ಕಾರ್ಡ್ ಪ್ರಕಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಟುಕಿದ್ದಾರೆ.

ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಅಕ್ರಮ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಬಾಬರ್ ಸಮಾಧಿಯನ್ನು ಅಪಘಾನಿಸ್ತಾನದಲ್ಲಿ ಹುಡುಕಿಕೊಂಡು ಹೋದ ಇಂದಿರಾ ಗಾಂಧಿಯ ಪಕ್ಷ ಶ್ರೀ ರಾಮನನ್ನು ಒಪ್ಪಲು ಹೇಗೆ ಸಾಧ್ಯ? ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಎಲ್ಲಾ ನಕಲಿ ಗಾಂಧಿಗಳು ಬಾಬರ್ ಸಮಾಧಿಗೆ ಹೋಗಿ ನಮಾಜ್ ಮಾಡಿ ಬಂದಿದ್ದರು. ಇವರು ಅಯೋಧ್ಯೆಗೆ ಬರದೇ ಇರುವುದೇ ಒಳ್ಳೆಯದು ಎಂದು ಚಾಟಿ ಬೀಸಿದ್ದಾರೆ.

ಭೂತ ಪಿಶಾಚಿಗಳು ಮಹಾವೀರ ಹನುಮನ ಹೆಸರು ಕೇಳಿದ ಕೂಡಲೇ ಓಡಿ ಹೋಗುವುದು ಎಂದು ಹನುಮಾನ್ ಚಾಲೀಸಾ ಹೇಳಿದೆ ಎಂದು ಯತ್ನಾಳ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES