Sunday, December 22, 2024

ಲಾಡ್ಜ್‌ನ ನೆಲಮಹಡಿಯಲ್ಲಿ ನಡೀತಿತ್ತು ಹೈಟೆಕ್ ವೇಶ್ಯಾವಾಟಿಕೆ ದಂಧೆ

ಹೊಸಪೇಟೆ: ಲಾಡ್ಜ್​ ಒಂದರ ನೆಲಮಹಡಿಯಲ್ಲಿ ಅಡಗಿದ್ದ ಸತ್ಯವನ್ನ ಕಂಡು ಜನರು ಶಾಕ್ ಆಗಿದ್ದಾರೆ.

ಹೌದು,ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟ್‌ನ ಲಾಡ್ಜ್​ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಹೊಸಪೇಟೆ ಪೊಲೀಸರು ಜಂಟಿಯಾಗಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು. ವೇಳೆ ಲಾಡ್ಜ್​ನ ನೆಲಮಹಡಿಯಲ್ಲಿ ಅಡಗಿದ್ದ ಅಸಲಿ ಸತ್ಯ ಪೊಲೀಸರನ್ನೇ ಬೆಪ್ಪಾಗಿಸಿತ್ತು.

6 ಜನರನ್ನ ವಶಕ್ಕೆ ಪಡೆದುಕೊಂಡ ಪೊಲೀಸರು 

ನೆಲಮಹಡಿಯಲ್ಲಿದ್ದ ಕಿಂಡಿಯೊಂದನ್ನು ಓಪನ್​ ಮಾಡಿದ್ದ ಪೊಲೀಸರಿಗೆ ವೇಶ್ಯಾವಾಟಿಕೆ ದಂಧೆಯ ಸತ್ಯದ ಅನಾವರಣವಾಗಿತ್ತು. ಕಿಂಡಿಯೊಳಗಿದ್ದ ನಾಲ್ಕು ಮಹಿಳೆಯರು ಪೊಲೀಸರನ್ನು ನೋಡ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ರು. ನಾಲ್ವರು ಸಂತ್ರಸ್ತ ಮಹಿಳೆಯರನ್ನ ರಕ್ಷಣೆ ಮಾಡಿದ ಪೊಲೀಸರು, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ 6 ಜನರನ್ನ ವಶಕ್ಕೆ ಪಡೆದರು.

ಅಂದಾಗೆ ಹೊರರಾಜ್ಯಗಳಿಂದ ಹೊಸಪೇಟೆಗೆ ಮಹಿಳೆಯರನ್ನು ಕರೆತಂದು ಖದೀಮರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಲ್ಲದೇ ಲಾಡ್ಜ್​ನಲ್ಲಿ ಯಾರಿಗೂ ಅನುಮಾನ ಬಾರದಂತೆ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇನ್ನೂ ದಂಧೆಯಲ್ಲಿ ತೊಡಗುತ್ತಿದ್ದ ಮಹಿಳೆಯರಿಗಾಗೇ ನೆಲಮಹಡಿಯಲ್ಲಿ ಕಿಂಡಿಯೊಂದನ್ನ ನಿರ್ಮಿಸಿ ಅದರಲ್ಲಿ ಅವರನ್ನ ಬಚ್ಚಿಡುತ್ತಿದ್ದರು.

ಪೊಲೀಸರ ದಾಳಿ ವೇಳೆ ಲಾಡ್ಜ್​ನಲ್ಲಿ ಲಾಕ್​ ಆದ ಮಹಿಳೆಯರು ಒಬ್ಬರು ಕೂಡ್ಲಿಗಿ ಮೂಲದವರು, ಮತ್ತಿಬ್ಬರು ಕೊಲ್ಕತ್ತಾದವರು ಹಾಗೂ ಆಂಧ್ರ ಮೂಲದ ಓರ್ವ ಮಹಿಳೆ ಅಂತ ತಿಳಿದುಬಂದಿದೆ. ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ವ್ಯಕ್ತಿಗಳು ಕೊಲ್ಕತ್ತಾ ಮೂಲದವರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES