Wednesday, January 22, 2025

ಬಿರಿಯಾನಿ ತಿನ್ನೋಕೆ ಮಸೀದಿಗೆ ಯಾಕೆ ಹೋಗ್ತೀರಿ? : ಆರ್. ಅಶೋಕ್

ಬೆಂಗಳೂರು : ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗಬೇಕು? ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗೆ ವಿಪಕ್ಷ ನಾಯಕ ಆರ್. ಅಶೊಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನವರಿ 22ರಂದು ಕಾಂಗ್ರೆಸ್ ನವರಿಗೆ ಬ್ಲಾಕ್ ಡೇ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ನ ಎಲ್ಲಾ ಕಾಮಾಲೆ ಕಣ್ಣಿನವರಿಗೆ ಜನವರಿ 22ರಂದು ಏನು ಏನೂ ಕಾಣೋದಿಲ್ಲ ಎಂದು ಕುಟುಕಿದರು.

ಸಿಎಂ ಸಿದ್ದರಾಮಯ್ಯ ಯಾಕೆ ಟೋಪಿ ಹಾಕಿಕೊಂಡು ಮಸೀದಿಗೆ ಹೋಗಬೇಕು..? ಬಿರಿಯಾನಿ ತಿನ್ನೋಕೆ ಅಲ್ಲಿಗೆ ಯಾಕೆ ಹೋಗ್ತೀರಿ? ಮನೆಯಲ್ಲೇ ತಿನ್ನಬಹುದಲ್ವಾ..? ನೀವು ನಾಟಕ ಆಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಮಂತ್ರಿಗಳು ಏನು ನಾಲಾಯಾಕಾ..?

ಕಾಂಗ್ರೆಸ್ ಕಾರ್ಯಕರ್ತರಿಗೆ ಗೂಟದ ಕಾರು ಕೊಡಲು ಗ್ಯಾರಂಟಿ ಜಾರಿಗೆ ಸಮಿತಿ ಮಾಡಿದ್ದೀರಿ. ಸಿದ್ದರಾಮಯ್ಯ ಸಂಪುಟದ ಮಂತ್ರಿಗಳು ಏನು ನಾಲಾಯಾಕಾ..? ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತಮ್ಮ ಕಾರ್ಯಕರ್ತರ ತೃಪ್ತಿ ಪಡಿಸಲು, ಅಧಿಕಾರ ಕೊಡುವಂತ ಕಾರ್ಯಕ್ಕೆ ಹಣ ಕೊಡ್ತಿರೋದು ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಕಾರ್ಯಕ್ರಮಗಳು ಜೋರು ಇವೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದುಡಿಸಿಕೊಳ್ಳಲು ಕುತಂತ್ರ ರಾಜಕಾರಣವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಕೂಡ ಜೋರು ಇವೆ. ಅವರು ಏನು ಈ ರೀತಿ ಕಮಿಟಿ ಮಾಡಿ, ಹಣ ಖರ್ಚು ಮಾಡಿಲ್ಲ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES