Friday, January 24, 2025

ಮೈತ್ರಿಗೆ ಮುದ್ರೆ ಹಾಕಿರೋದು ದೇವೇಗೌಡ್ರು, ಬಿಜೆಪಿ ಜೊತೆ ಕೆಲಸ ಮಾಡಿ : ನಿಖಿಲ್ ಕುಮಾರಸ್ವಾಮಿ ಕರೆ

ಮಂಡ್ಯ : ಮೈತ್ರಿಗೆ ಮುದ್ರೆ ಹಾಕಿರೋದು ದೇವೇಗೌಡರು. ಹೀಗಾಗಿ, ನಾವು ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು ಎಂದು ಜೆಡಿಎಸ್​ ನಾಯಕರು, ಮುಖಂಡರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಜೊತೆ ನಾವು ಮೈತ್ರಿಯಾಗಿದ್ದೇವೆ. ಯಾವ ಕ್ಷೇತ್ರ ಸಿಗುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಸಂಕ್ರಾಂತಿ ಬಳಿಕ ಸೀಟು ಹಂಚಿಕೆ ಫೈನಲ್ ಆಗಲಿದೆ. ಯಾವ ಯಾವ ಕ್ಷೇತ್ರ ಅಂತ ಆಗ ಅಂತಿಮ ಆಗುತ್ತದೆ. ಯಾವುದೇ ಕ್ಷೇತ್ರ ನಮಗೆ ಸಿಗಲಿ, ನಾವು ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿ ಜೊತೆ ಒಟ್ಟಾಗಿ ಕೆಲಸ ಮಾಡಿ ಎಂದು ಮಂಡ್ಯ ನಾಯಕರು, ಮುಖಂಡರಿಗೆ ಮನವಿ ಮಾಡಿದ್ದಾರೆ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದೀರಿ. ದೇವೇಗೌಡರು, ಕುಮಾರಸ್ವಾಮಿ ಅವರಿಗೆ ನಿಮ್ಮ ಭಾವನೆ ತಿಳಿಸುತ್ತೇನೆ‌. ಅಂತಿಮವಾಗಿ ದೇವೇಗೌಡರು ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತಾರೆ. ನೀವೆಲ್ಲ ಏನು ಹೇಳ್ತಿರೋ ವರಿಷ್ಠರು ಹಾಗೆಯೇ ಮಾಡ್ತಾರೆ. ಕ್ಷೇತ್ರಗಳಲ್ಲಿ ಏನಾದ್ರು ಸಮಸ್ಯೆಗಳು ಇದ್ದರೆ, ಸರಿ ಮಾಡಿಕೊಂಡು ಬಿಜೆಪಿ ಜತೆ ಒಟ್ಟಾಗಿ ಕೆಲಸ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES