Monday, December 23, 2024

ದುಬೆ ದರ್ಬಾರ್ : ಭಾರತಕ್ಕೆ 6 ವಿಕೆಟ್​ಗಳ ಭರ್ಜರಿ ಗೆಲುವು

ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. 

ಆಲ್​ರೌಂಡರ್ ಶಿವಂ ದುಬೆ ಬೌಲಿಂಗ್​ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ದುಬೆ ದರ್ಬಾರ್​ಗೆ ಕಂಗಾಲಾದ ಅಫ್ಘಾನ್​ ತಂಡ ಮೊದಲ ಪಂದ್ಯವನ್ನು ಸುಲಭವಾಗಿ ಕೈಚೆಲ್ಲಿತು. 17.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಭಾರತ ಗೆಲುವಿನ ನಗೆ ಬೀರಿತು.

159 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಭಾರತಕ್ಕೆ ಅಫ್ಘಾನ್ ಬೌಲರ್​ಗಳು ಆರಂಭದಲ್ಲೇ ಬಿಗ್​ ಶಾಕ್ ನೀಡಿದರು. ನಾಯಕ ರೋಹಿತ್​ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಶುಭ್​ಮನ್ ಗಿಲ್ 23 ಹಾಗೂ ತಿಲಕ್ ವರ್ಮಾ 26 ರನ್​ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.

ಗಿಲ್ ಹಾಗೂ ತಿಲಕ್​ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಶಿವಂ ದುಬೆ ಅಬ್ಬರಿ ಬೊಬ್ಬಿರಿದು. ದುಬೆ ತೂಫಾನ್ ಬ್ಯಾಟಿಂಗ್​ಗೆ ಅಫ್ಘಾನ್​ ಬೌಲರ್​ಗಳು ಬೆಚ್ಚಿ ಬಿದ್ದರು. 40 ಎಸೆತ ಎದುರಿಸಿದ ದುಬೆ, 2 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನೊಂದಿಗೆ ಅಜೇಯ 60* ರನ್​ ಸಿಡಿಸಿ ಗೆಲುವು ತಂದುಕೊಟ್ಟರು. ಉಳಿದಂತೆ ಜಿತೇಶ್​ ಶರ್ಮಾ 31 ಹಾಗೂ ರಿಂಕು ಸಿಂಗ್ ಅಜೇಯ 16 ರನ್​ ಸಿಡಿಸಿದರು.

ಮುಖೇಶ್, ಅಕ್ಸರ್ 2, ದುಬೆ 1 ವಿಕೆಟ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್​ ಗಳಿಸಿತು. ಅಫ್ಘಾನಿಸ್ತಾನ ತಂಡದ ಪರ ಮೊಹಮ್ಮದ್ ನಬಿ 42, ಅಜ್ಮತುಲ್ಲಾ ಒಮರ್ಜಾಯ್ 29, ಇಬ್ರಾಹಿಂ ಝದ್ರಾನ್ 25, ರೆಹಮಾನುಲ್ಲಾ ಗುರ್ಬಾಜ್ 23 ರನ್ ಸಿಡಿಸಿದರು. ಭಾರತದ ಪರ ಮುಖೇಶ್ ಕುಮಾರ್ 2, ಅಕ್ಸರ್ ಪಟೇಲ್ 2, ಶಿವಂ ದುಬೆ 1 ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES