Friday, December 20, 2024

ದೆಹಲಿ, ಎನ್​ಸಿಆರ್​ನಲ್ಲಿ ಭೂಕಂಪ

ಬೆಂಗಳೂರು : ದೆಹಲಿ, ಎನ್​ಸಿಆರ್​ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ಸಂಭವಿಸಿದ ಕೂಡಲೇ ಜನರು ಮನೆ ಹಾಗೂ ಕಚೇರಿಯಿಂದ ಹೊರಗಡೆ ಓಡಿ ಬಂದಿದ್ದಾರೆ.

6.2 ತೀವ್ರತೆಯ ಪ್ರಬಲ ಭೂಕಂಪವೇ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ ಎಂದು ತಿಳಿದುಬಂದಿದೆ. ಪಂಜಾಬ್​, ಚಂಡೀಗಢ, ಗಾಜಿಯಾಬಾದ್​ನಲ್ಲೂ ಕಂಪನದ ಅನುಭವವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ಪಾಂಚಲ್ ಪ್ರದೇಶದ ದಕ್ಷಿಣದಲ್ಲಿಯೂ ಭೂಕಂಪದ ಅನುಭವವಾಗಿದೆ. ಈ ಭೂಕಂಪದ ಕಂಪನಗಳು ಭಾರತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನದಲ್ಲೂ ಸಂಭವಿಸಿದೆ.

RELATED ARTICLES

Related Articles

TRENDING ARTICLES