Sunday, December 22, 2024

ದೇವೇಗೌಡರಿಗೆ ರಾಗಿಯ ಕಲಾಕೃತಿ ನೀಡಿದ ಅಭಿಮಾನಿ

ಬೆಂಗಳೂರು : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರಿಗೆ ಅಭಿಮಾನಿಯೊಬ್ಬ ರಾಗಿಯ ಕಲಾಕೃತಿ ನೀಡಿ ತಮ್ಮ ಅಭಿಮಾನ ಮೆರೆದಿದ್ದಾನೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕೊಟ್ರೇಶ್ ಅವರೇ ರಾಗಿಯ ಕಲಾಕೃತಿ ನೀಡಿರುವ ಅಭಿಮಾನಿ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡ ನಿವಾಸಕ್ಕೆ ಜೆಡಿಎಸ್ ಮುಖಂಡರ ಜೊತೆ ತೆರಳಿ ಕಲಾಕೃತಿಯನ್ನು ನೀಡಿದ್ದಾರೆ.

ಕೊಟ್ರೇಶ್​ ಅವರು ರಾಗಿಯಲ್ಲೇ ದೇವೇಗೌಡರ ಕಲಾಕೃತಿ ರಚಿಸಿದ್ದಾರೆ. ಕಲಾಕೃತಿಯ ಒಳಗೆ ‘ಮಣ್ಣಿನ ಮಗ’ ಶ್ರೀ ಹೆಚ್​.ಡಿ. ದೇವೇಗೌಡ, ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ (1996-1997) ಎಂದು ಬರೆಯಲಾಗಿದೆ. ಕಲಾಕೃತಿಯನ್ನು ಕಂಡು ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಮಹೇಶ್ ಗೌಡ, ಬಸವರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES