Wednesday, December 25, 2024

ನಿನ್ನ ಹಾಗೂ ನಿನ್ನ ಕುಟುಂಬದ ರಾಸಲೀಲೆಗಳು ನನ್ನತ್ರ ಇವೆ : ರೇವಣ್ಣ ಮೇಲೆ ದೇವರಾಜೇಗೌಡ ಆರೋಪ

ಹಾಸನ : ನಿನ್ನ ಹಾಗೂ ನಿನ್ನ ಕುಟುಂಬದ ರಾಸಲೀಲೆಗಳು ನನ್ನತ್ರ ಇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕುಟುಂಬದ ಮೇಲೆ ವಕೀಲ‌ ದೇವರಾಜೇಗೌಡ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೇವಣ್ಣ, ನಿನಗೆ ಚಾಲೆಂಜ್.. ನೇರವಾಗಿ ಹೇಳ್ತೇನೆ. ನಿನಗೆ ತಾಕತ್ ಇದ್ರೆ, ನೀನು ಗಂಡಸಾಗಿದ್ರೆ ನನ್ನ ಎದುರುಗಡೆ ಬಾ ಎಂದು ಏಕವಚನದಲ್ಲೇ ಸವಾಲ್ ಹಾಕಿದ್ದಾರೆ.

ನಿನ್ನ ಅಕ್ರಮ ಚಟುವಟಿಕೆಗಳೆಲ್ಲವುಗಳ ದಾಖಲೆ ತೆಗೆದುಕೊಂಡು ಬರ್ತೇನೆ. ನಿನ್ನ ಹಾಗೂ ನಿನ್ನ ಕುಟುಂಬ ರಾಸಲೀಲೆಗಳು ನನ್ನತ್ರ ಇವೆ. ದೇವೇಗೌಡ್ರು ಮೇಲಿರೋ ಗೌರವ, ಕುಮಾರಸ್ವಾಮಿ ಮೇಲಿರೋ ಅಭಿಮಾನಕ್ಕೆ ಬಿಡುಗಡೆ ಮಾಡಲಿಲ್ಲ. ನೀನು ನಮ್ಮ ನಾಯಕರಿಗೆ ವೇದಿಕೆ ಮೇಲೆ ನಿಂತು ಡರ್ಟಿಫೆಲೋ ಅಂತ ಕರೆದಲ್ಲ ನೀನು.. ಡರ್ಟಿ ಫೆಲೋ ಅಂದ್ರೆ ಅರ್ಥ ಏನು? ಲಜ್ಜೆಗೆಟ್ಟವನು ಅಂತ ಎಂದು ಗುಡುಗಿದ್ದಾರೆ.

ನಾನು ಲಜ್ಜೆಗೆಟ್ಟವನೋ, ನೀನು ಲಜ್ಜೆಗೆಟ್ಟವನೋ..!

ನಿನ್ನ ಮಗ ಯಾಕೆ ಹೋಗಿ ಕೋರ್ಟ್ ನಲ್ಲಿ ಸ್ಟೇ ತೆಗೆದುಕೊಂಡು ಬಂದಿದ್ದಾನೆ. ರಾಜ್ಯದಲ್ಲಿರುವ ಪ್ರತಿಯೊಂದು ಮಾಧ್ಯಮದ ಮೇಲೆ, ರಾಷ್ಟ್ರೀಯ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳು, ಟ್ವಿಟರ್, ಫೇಸ್​ಬುಕ್​ನಲ್ಲಿ ನನ್ನ ಅಶ್ಲೀಲ ಚಿತ್ರಗಳನ್ನ ಬಿಡುಗಡೆ ಮಾಡಬಾರದು ಅಂತೇಳಿ. ನಾನು ಲಜ್ಜೆಗೆಟ್ಟವನೋ.. ನೀನು ಲಜ್ಜೆಗೆಟ್ಟವನೋ.. ತಾಕತ್ ಇದ್ಯಾ ನಿನಗೆ, ಬಾ ನೋಡೋಣ ಎಂದು ಕಿಡಿಕಾರಿದ್ದಾರೆ.

ಇದು ನಿನಗೆ ಕೊನೆಯ ಎಚ್ಚರಿಕೆ ಸಂದೇಶ

ಹಾಸನದ ಎನ್​ಆರ್ ಸರ್ಕಲ್ ನಲ್ಲಿ ದೊಡ್ಡ ಡಿಸ್‌ಪ್ಲೇ ಬೋರ್ಡ್ ಹಾಕಿಸುತ್ತೇನೆ. ವಿಡಿಯೋ‌ ಪ್ಲೇ ಮಾಡಿಸ್ತೇನೆ. ಯಾರ ಬಗ್ಗೆ ಮಾತನಾಡ್ತಾ ಇದ್ದೀಯಾ ನೀನು? ಗೌರವದಿಂದ ಬದುಕಿದ್ರೆ ಸರಿ.. ಗೌರವ ಬಿಟ್ಟು ಈ ಮೀರ್ ಸಾದಿಕ್ ಕೆಲಸ ಮಾಡಿದ್ರೆ ಪರಿಣಾಮ ಬೇರೆ ಆಗ್ತದೆ. ಇದು ನಿನಗೆ ಕೊನೆಯ ಎಚ್ಚರಿಕೆಯ ಸಂದೇಶ ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES