Tuesday, December 24, 2024

ಬಿಜೆಪಿ-ಜೆಡಿಎಸ್ ಅಣ್ಣ-ತಮ್ಮಂದಿರಂತೆ ದುಡಿದು ಗೆಲ್ಲಬೇಕು : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : 28 ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಅಣ್ಣ-ತಮ್ಮಂದಿರಂತೆ ದುಡಿದು ಗೆಲ್ಲಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಪ್ರಚಾರ ಕೈಗೊಳ್ಳುತ್ತೇವೆ. ಒಗ್ಗಟ್ಟಾಗಿ ಇಬ್ಬರು ಕೂಡ ಮಾತನಾಡಿಕೊಂಡು ಕೆಲಸ ಮಾಡ್ತಿವಿ ಎಂದು ತಿಳಿಸಿದ್ದಾರೆ.

ಜೆಡಿಎಸ್​​ಗೆ ಎಷ್ಟು ಕ್ಷೇತ್ರ ಸಿಗಲಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ತಿಂಗಳು ಕುಮಾರಸ್ವಾಮಿ ಹಾಗೂ ನಮ್ಮ ನಾಯಕರು ದೆಹಲಿಗೆ ಹೋಗ್ತಾರೆ. ಅದಕ್ಕೆ ಒಂದು ದಿನಾಂಕ‌ ನಿಗದಿಯಾಗುತ್ತದೆ. ಅತೀ ಶೀಘ್ರದಲ್ಲಿ ನಿಮ್ಮೆಲ್ಲರಿಗೂ ಸಿಹಿ ಸುದ್ದಿ ಕೊಡ್ತಿವಿ ಎಂದು ಹೇಳಿದ್ದಾರೆ.

ಒಳ್ಳೆಯ ಉದ್ದೇಶದಿಂದ ಬಿಜೆಪಿ ಜೊತೆ ಮೈತ್ರಿ

ನಮಗೆ ಸಿಗುವ ಸ್ಥಾನಗಳಲ್ಲಿ ಎಲ್ಲಾ ಗೆಲ್ಲಬೇಕು. ದೇವೇಗೌಡರು ತೆಗದುಕೊಂಡ ಎನ್​ಡಿಎ ಜೊತೆಗಿನ ಮೈತ್ರಿ ಒಳ್ಳೆಯ ಉದ್ದೇಶದಿಂದ ತೆಗದುಕೊಂಡಿರುವ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವವನ್ನ ನಾವೆಲ್ಲಾ ಕಂಡಿದ್ದೇವೆ. ನಮ್ಮನ್ನ ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಹಾಗಾಗಿ ಒಳ್ಳೆಯ ಉದ್ದೇಶದಿಂದ ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES