Monday, December 23, 2024

‘ಭಾರತ್ ನ್ಯಾಯ್ ಯಾತ್ರೆ’ಗೆ ಶಾಕ್ ನೀಡಿದ ಮಣಿಪುರ ಸರ್ಕಾರ

ನವದೆಹಲಿ : ‘ಭಾರತ್ ಜೋಡೋ ಯಾತ್ರೆ’ಯ ಯಶಸ್ಸಿನ ಬಳಿಕ ‘ಭಾರತ್ ನ್ಯಾಯ್ ಯಾತ್ರೆ’ಗೆ ಮುಂದಾಗಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಮಣಿಪುರ ಸರ್ಕಾರ ಶಾಕ್ ನೀಡಿದೆ.

ಇಂಫಾಲ್​ನ ಹಟ್ಟಾ ಕಾಂಗ್ಜೆಬಂಗ್​ನಿಂದ ಪ್ರಾರಂಭವಾಗಬೇಕಿದ್ದ ‘ಭಾರತ್ ನ್ಯಾಯ್ ಯಾತ್ರೆ’ಗೆ ಅನುಮತಿ ನೀಡಲು ಮಣಿಪುರ ಸರ್ಕಾರ ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್​ ಸಿಂಗ್ ಅವರು, ‘ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಸರ್ಕಾರದ ನಿರ್ಧಾರ ದುರದೃಷ್ಟಕರ

ಇದಕ್ಕೆ ಸ್ಥಳೀಯ ಕಾಂಗ್ರೆಸ್​ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಮುಖಂಡ ಮೇಘಚಂದ್ರ ಮಾತನಾಡಿದ್ದು, ಸರ್ಕಾರದ ಈ ನಿರ್ಧಾರ ದುರದೃಷ್ಟಕರವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES