Wednesday, January 22, 2025

ಗುಡ್ ನ್ಯೂಸ್.. ಭಾರತದಲ್ಲಿಯೇ ನಡೆಯಲಿದೆ IPL-2024 ಟೂರ್ನಿ

ಬೆಂಗಳೂರು : ಐಪಿಎಲ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ವೊಂದು ಸಿಕ್ಕಿದೆ. ಈ ಬಾರಿಯ ಐಪಿಎಲ್-2024​ ಟೂರ್ನಿ ಭಾರತದಲ್ಲಿಯೇ ನಡೆಯಲಿದೆ.

ಈ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ದೇಶದಲ್ಲಿ ಐಪಿಎಲ್​ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಐಪಿಎಲ್ ಭಾರತದಲ್ಲಿ ನಡೆಯುವ ಸಾಧ್ಯತೆಯಿದೆ, ಸ್ಥಳವನ್ನು ಬದಲಾಯಿಸುವ ಯೋಜನೆ ಇಲ್ಲ ಎಂದು ವರದಿಯಾಗಿದೆ.

ಚುನಾವಣಾ ಸಮಯದಲ್ಲಿ ಪಂದ್ಯವನ್ನು ನಡೆಸಲು ಯಾವುದೇ ಸ್ಥಳದಲ್ಲಿ (ಕ್ರೀಡಾಂಗಣ) ತೊಂದರೆಯಾದರೆ ಮತ್ತೊಂದು ಸ್ಥಳಕ್ಕೆ ಪಂದ್ಯವನ್ನು ಸ್ಥಳಾಂತರಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್ನೂ ಇದೇ ಮಾರ್ಚ್​ 22ರಿಂದ ಐಪಿಎಲ್​-2024 ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ.

ಐಪಿಎಲ್ ತಂಡಗಳು ಹಾಗೂ ನಾಯಕರು

  • ಮುಂಬೈ ಇಂಡಿಯನ್ಸ್ : ಹಾರ್ದಿಕ್ ಪಾಂಡ್ಯ / ರೋಹಿತ್ ಶರ್ಮಾ
  • ಕೋಲ್ಕತ್ತಾ ನೈಟ್ಸ್ ರೈಡರ್ಸ್: ಶ್ರೇಯಸ್ ಅಯ್ಯರ್
  • ಚೆನ್ನೈ ಸೂಪರ್ ಕಿಂಗ್ಸ್ : ಮಹೇಂದ್ರ ಸಿಂಗ್ ಧೋನಿ
  • ಪಂಜಾಬ್ ಕಿಂಗ್ಸ್ : ಮಯಾಂಕ್ ಅಗರ್ವಾಲ್
  • ಡೆಲ್ಲಿ ಕ್ಯಾಪಿಟಲ್ಸ್ : ರಿಷಬ್ ಪಂತ್ / ಡೇವಿಡ್ ವಾರ್ನರ್
  • ರಾಜಸ್ಥಾನ್ ರಾಯಲ್ಸ್ : ಸಂಜು ಸ್ಯಾಮ್ಸನ್
  • ಸನ್ ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್
  • ಲಕ್ನೋ ಸೂಪರ್ ಜೈಂಟ್ಸ್ : ಕೆ.ಎಲ್ ರಾಹುಲ್
  • ರಾಯಲ್ ಚಾಲೆಂಜರ್ಸ್ ಬೆಂಗಳೂರು : ಫಾಫ್ ಡು ಪ್ಲೆಸಿಸ್
  • ಗುಜರಾತ್ ಟೈಟಾನ್ಸ್ : ಶುಭ್​ಮನ್ ಗಿಲ್

RELATED ARTICLES

Related Articles

TRENDING ARTICLES