Thursday, January 9, 2025

ಬ್ರೇಕ್ ಫೇಲ್.. ರೈಲ್ವೆ ಹಳಿಗೆ ನುಗ್ಗಿದ ಲಾರಿ

ಚಿಕ್ಕಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಲಾರಿ ಬ್ರೇಕ್ ಫೇಲ್​​​​​​​​​​ ಆಗಿ ರೈಲ್ವೆ ಹಳಿಗೆ ನುಗ್ಗಿದೆ.

ಚಿಕ್ಕಬಳ್ಳಾಪುರ ನಗರದ ಅಪೊಲೋ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಬಿಬಿ ರಸ್ತೆಯಿಂದ ರೈಲ್ವೆ ಹಳಿಯತ್ತ ಲಾರಿ ನುಗ್ಗಿ ಹಳಿ ಮೇಲೆ ನಿಂತಿದೆ.

ಈ ಹಿನ್ನೆಲೆ ಚಿಕ್ಕಬಳ್ಳಾಪುರ ಬೆಂಗಳೂರು ಮಾರ್ಗದ 2 ರೈಲುಗಳ ಸಂಚಾರ ಸ್ಥಗಿತವಾಗಿದೆ. 1 ಗಂಟೆ ಹಾಗೂ 1.40ಕ್ಕೆ ಹೊರಡಬೇಕಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ರೈಲು ಬರುವ ಸಂದರ್ಭದಲ್ಲಿ ಘಟನೆ ಸಂಭವಿಸಿಲ್ಲ.

RELATED ARTICLES

Related Articles

TRENDING ARTICLES