ದಾವಣಗೆರೆ : ಬೆಣ್ಣೆ ನಗರಿಯಲ್ಲಿ ಭದ್ರಾ ನೀರಿಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿಭಟನೆ ನಡೆಸಿದರು. ರಸ್ತೆ ಬಂದ್ ಮಾಡಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಎಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಯಿತು. ಈ ವೇಳೆ ಪ್ರತಿಭಟನಕಾರರು ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿದ್ದರಿಂದ ನಗರದ ಪೂನಾ-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದಾಗಿ ವಾಹನ ಸವಾರರು ಹೈರಾಣಾದ ದೃಶ್ಯಗಳು ಕಂಡು ಬಂದವು.
ಭದ್ರಾ ನೀರು ಆನ್ ಆಂಡ್ ಆಫ್ ಪದ್ದತಿಯ ಮೂಲಕ ಕೊನೆ ಭಾಗದ ರೈತರಿಗೆ 53 ದಿನ ನೀರು ಬಿಡಲು ಕಾಡಾ ಸಮಿತಿಯ ನಿರ್ಧಾರ ಮಾಡಿದೆ. ಡ್ಯಾಂನಲ್ಲಿ ನೀರು ಇದೇ ತಿಂಗಳಿಗೆ 20 ದಿನದಂತೆ 70 ದಿನ ನಿರಂತರವಾಗಿ ನೀರು ಬಿಡುವಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, AC ಅವರಿಗೆ ಮನವಿ ಸಲ್ಲಿಸಿದರು.