ಬೆಂಗಳೂರು : ಮಹಾರಾಷ್ಟ್ರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ್ಣಕ್ಕೆ ಜಯ ಸಿಕ್ಕಿದೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ತೀರ್ಪು ನೀಡಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆಗೆ ಭಾರಿ ಹಿನ್ನಡೆಯಾಗಿದೆ.
ಏಕನಾಥ್ ಶಿಂಧೆ ಬಣದವರು ನೀಡಿರುವ ಪುರಾವೆಗಳು ಹಾಗೂ ಉತ್ತರವನ್ನು ಒಪ್ಪುತ್ತೇನೆ. ನಿಜವಾದ ಪಕ್ಷ ಯಾವುದು ಎಂದು ನಿರ್ಧಾರ ಮಾಡುವ ಹಕ್ಕು ನಮಗಿದೆ. ಏಕನಾಥ್ ಶಿಂಧೆಯನ್ನು ಪದಚ್ಯುತಿಗೊಳಿಸುವ ಹಕ್ಕು ಉದ್ಧವ್ ಠಾಕ್ರೆ ಅವರಿಗೆ ಇಲ್ಲ ಎಂದು ರಾಹುಲ್ ನಾರ್ವೇಕರ್ ಖಚಿತಪಡಿಸಿದ್ದಾರೆ.
ಶಿಂಧೆ ಬಣವೇ ನಿಜವಾದ ಶಿವಸೇನೆ
ಶಿವಸೇನೆ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಘಟನೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಅರ್ಜಿದಾರ ಉದ್ಧವ್ ಠಾಕ್ರೆ ಅವರ ಪತ್ರ ಪ್ರಸ್ತುತವಾಗಿಲ್ಲ. ಯಾಕೆಂದರೆ ಉದ್ಧವ್ ಠಾಕ್ರೆ ಅವರ 2018ರ ಸಂವಿಧಾನ ಸ್ವೀಕಾರರ್ಹವಲ್ಲ. ತಿದ್ದುಪಡಿ ಒಪ್ಪಲು ಸಾಧ್ಯವಿಲ್ಲ. 2018ರ ಸಂವಿಧಾನ ಗಣನೆಗೆ ತೆಗೆದುಕೊಳ್ಳಬೇಕೆಂಬುದನ್ನು ಒಪ್ಪಲ್ಲ. ಆಯೋಗದ ದಾಖಲೆ ಪ್ರಕಾರ ಶಿಂಧೆ ಬಣ ನಿಜವಾದ ಶಿವಸೇನೆಯಾಗಿದೆ ಎಂದು ಹೇಳಿದ್ದಾರೆ.