Sunday, December 22, 2024

ಕಾಂಗ್ರೆಸ್​ನವರು ಸಂಪೂರ್ಣ ಹುಚ್ಚರಾಗಿದ್ದಾರೆ : ಸದಾನಂದಗೌಡ

ಬೆಂಗಳೂರು : ಕಾಂಗ್ರೆಸ್ ನಾಯಕರು ಸಂಪೂರ್ಣ ಹುಚ್ಚರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದ ಆಹ್ವಾನವನ್ನು ಬಹಿಷ್ಕರಿಸಿರುವ ಕಾಂಗ್ರೆಸ್ ನಾಯಕರ ನಡೆಗೆ ಅವರು ಕಿಡಿಕಾರಿದ್ದಾರೆ.

ಹುಚ್ಚುತನಕ್ಕೂ ಒಂದು ಲಿಮಿಟ್ ಇದೆ. ಹುಚ್ಚುತನ ಮೀರಿ ಹೋಗುವಂತದ್ದು ಕಾಂಗ್ರೆಸ್ ನವರ ಪರಿಸ್ಥಿತಿ ಆಗಿದೆ. ಇವಾಗ್ಲಂತೂ ಕಾಂಗ್ರೆಸ್ ನವರು ಸಂಪೂರ್ಣ ಹುಚ್ಚರಾಗಿದ್ದಾರೆ. ರಾಮಮಂದಿರ ವಿರುದ್ಧವಾಗಿ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಹಾಕಿದ್ದವರು, ರಾಮಸೇತು ಕಟ್ಟಿದ ಇಂಜಿನಿಯರ್ ಯಾರು ಅಂತ ರಿಪೋರ್ಟ್ ಕೊಡಿ ಎಂದವರು, ಇವಾಗ ಈ ರೀತಿಯ ಹೇಳಿಕೆಯಿಂದ ಅವರು ಹುಚ್ಚರೆಂದು ಗೊತ್ತಾಗುತ್ತದೆ ಎಂದು ಛೇಡಿಸಿದ್ದಾರೆ.

28ಕ್ಕೆ 28 ಸ್ಥಾನ ಗೆಲ್ಲಲು ಸಭೆ ಮುಖ್ಯ

ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಈ ಸಭೆ ಮಹತ್ವದ್ದಾಗಿದೆ. ಈ ಸಭೆಯ ಮೂಲಕ ಸಣ್ಣಪುಟ್ಟ ವ್ಯತ್ಯಾಸಗಳು, ಗೊಂದಲ ಗಳು ಎಲ್ಲವೂ ಮುಗಿಯುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಸಭೆ ಆಗಿದೆ, ಮುಂದೆ ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿವಿ. ಇದು ಪಕ್ಷಕ್ಕೆ ಹೊಸ ರೀತಿಯ ಶಕ್ತಿ ಕೊಡಲು ಸಹಕಾರಿ ಆಗುತ್ತದೆ. ಎಲ್ಲಾ ಸಲಹೆ ಸೂಚನೆಗಳ ಕ್ರೂಢೀಕರಣ ಮಾಡಿ ಹೊಸ ಪ್ಲಾನ್ ಮೂಲಕ ಚುನಾವಣೆ ಗೆಲ್ಲುವ ಕೆಲಸ ಆಗುತ್ತದೆ ಎಂದು ಸದಾನಂದಗೌಡ ಹೇಳಿದ್ದಾರೆ.

RELATED ARTICLES

Related Articles

TRENDING ARTICLES