Saturday, September 21, 2024

ನಾಲ್ಕು ಗೋಡೆ ಮಧ್ಯೆ ಕೊವಿಡ್ ಭ್ರಷ್ಟಾಚಾರ ವಿವರಿಸಿದರೆ ಸಾಕೇ? : ಯತ್ನಾಳ್​ಗೆ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು : ಬಸನಗೌಡರೇ, ನಾಲ್ಕು ಗೋಡೆಯ ಮಧ್ಯೆ ನಿಮ್ಮ ಕೇಂದ್ರ ನಾಯಕರಿಗೆ ಕೊವಿಡ್ ಭ್ರಷ್ಟಾಚಾರ ವಿವರಿಸಿದರೆ ಸಾಕೇ? ಎಂದು ಶಾಸಕ ಯತ್ನಾಳ್​ರಿಗೆ ಸಚಿವ ದಿನೇಶ್ ಗುಂಡೂರವ್ ಪ್ರಶ್ನಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಿಮ್ಮ ಪಕ್ಷದ ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ನಡೆದಿದೆಯಾ? ಎಂದು ಕುಟುಕಿದ್ದಾರೆ.

ಕೊವಿಡ್ ಹಗರಣದಲ್ಲಿ ಕೇಂದ್ರದವರಿಗೆ ಪಾಲು ಹೋಗಿಲ್ಲವೇ..? ಅದರ ಫಲ ನಿಮ್ಮ ಕಣ್ಮುಂದೆ ಕಾಣ್ತಿಲ್ಲವೇ..? 40 ಸಾವಿರ ಕೋಟಿ ಕೊವಿಡ್ ಭ್ರಷ್ಟಾಚಾರದ ಬಗ್ಗೆ ನಿಮ್ಮ ಕೇಂದ್ರ ನಾಯಕರಿಗೆ ವಿವರಣೆ ನೀಡುವ ಬದಲು ನಾವು ರಚಿಸಿರುವ ತನಿಖಾ ಆಯೋಗದ ಮುಂದೆ ಬಂದು ಮಾಹಿತಿ ನೀಡಿ. ನಿಮ್ಮ ಬಳಿ ಇರುವ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ನೇತೃತ್ವದ ತನಿಖಾ ಆಯೋಗಕ್ಕೆ ಕೊಡಿ ಎಂದು ಚಾಟಿ ಬೀಸಿದ್ದಾರೆ.

ಬರೀ ಕಳಂಕದ ಕಾರ್ಯದಲ್ಲೇ ಆಡಳಿತ

ಯತ್ನಾಳ್ ಅವರೇ, ಜಗಜ್ಯೋತಿ ಬಸವೇಶ್ವರರು ಹೇಳಿದಂತೆ ಅಂತರಂಗ ಶುದ್ದಿಯ ಜೊತೆಗೆ ಬಹಿರಂಗ ಶುದ್ದಿಯೂ ಮುಖ್ಯ. ಕೊವಿಡ್ ವೇಳೆ ನಿಮ್ಮ ಬಿಜೆಪಿ ಸರ್ಕಾರ ಬಸವೇಶ್ವರರ ಶ್ರೇಷ್ಠ ಸಂದೇಶ ಕಾಯಕವೇ ಕೈಲಾಸ ಎಂಬ ವೈಚಾರಿಕತೆಯನ್ನ ಪಾಲಿಸಬೇಕಿತ್ತು.‌ ಆದರೆ, ಜನರ ಜೀವ ಉಳಿಸುವ ಹೋರಾಟ ನಡೆಯುತ್ತಿದ್ದಾಗ, ಬರೀ ಕಳಂಕದ ಕಾರ್ಯದಲ್ಲೇ ನಿರತರಾಗಿದ್ದು ಅತ್ಯಂತ ಅಮಾನವೀಯ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES