Sunday, December 22, 2024

ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14 ವರ್ಷದ ಬಾಲಕಿಗೆ ಹೆರಿಗೆ!

ಚಿಕ್ಕಬಳ್ಳಾಪುರ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14 ವರ್ಷದ ಬಾಲಕಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ತುಮಕೂರು ಜಿಲ್ಲೆಯ ಮಧುಗಿರಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದ್ದುಕೊಂಡು ಈಕೆ 9ನೇ ತರಗತಿ ಓದುತ್ತಿದ್ದಳು. ಈ ಮಧ್ಯೆ ಗರ್ಭಿಣಿಯಾಗಿದ್ದು, ಈಗ ಹೆರಿಗೆಯಾಗಿದೆ. ಆದರೆ, ತನಗೆ ಹೀಗಾಗಿರುವ ವಿಚಾರವನ್ನು ಆಕೆ ಭಯದಿಂದ ಮುಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Road Accident: ಟಾಟಾ ಏಸ್, ಬೈಕ್​​ ಮಧ್ಯೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು

ಬಾಗೇಪಲ್ಲಿ ತಾಲೂಕಿನ ಕನ್ನಂಪಲ್ಲಿ ಗ್ರಾಮದಲ್ಲಿ ತಾಯಿ ಜತೆಗೆ ಇದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ತಾಯಿಯು ಮಗಳನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಇದು ಹೊಟ್ಟೆನೋವಲ್ಲ, ಹೆರಿಗೆ ನೋವು ಎಂದು ಹೇಳಿದ್ದಾರೆ. ಇದರಿಂದ ತಾಯಿ – ಮಗಳಿಗೆ ಆಕಾಶವೇ ಕಳಚಿಬಿದ್ದಂತೆ ಆಗಿದೆ. ಕೂಡಲೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.

ಮಗುವಿನ Tuಕ 2.2 ಕೆಜಿ ಇದ್ದು, ರ 2.2 ಕೆಜಿ ಇರುವ ಗಂಡುಮಗು ಜನನವಾಗಿದೆ. ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈಗ ಬಾಲಕಿಯ ಈ ಪರಿಸ್ಥಿತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES