Sunday, December 22, 2024

ಮಾಲ್ದೀವ್ಸ್​ ಗೆ ತಕ್ಕ ಉತ್ತರ ಕೊಟ್ಟ ಭಾರತ: ಭಾರತದೊಂದಿಗೆ ನಾವಿದ್ದೇವೆ ಎಂದ ಇಸ್ರೇಲ್!

ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪದ ಭೇಟಿ ಹಾಗೂ ಭಾರತವನ್ನು ಅತ್ಯಂತ ಕಟುವಾಗಿ ಟೀಕಿಸಿದ ಮಾಲ್ಡೀವ್ಸ್​​​ಗೆ ತಕ್ಕ ಉತ್ತರ ಈಗಾಗಲೇ ಭಾರತ ನೀಡಿದೆ. ಇನ್ನು ಭಾರತೀಯರು ಕೂಡ ಭಾರತ ಹಾಗೂ ಲಕ್ಷದ್ವೀಪಕ್ಕೆ ಬೆಂಬಲ ನೀಡಿದ್ದಾರೆ.

ಇದೀಗ ಭಾರತ ಹಾಗೂ ಲಕ್ಷದ್ವೀಪವನ್ನು ಟೀಕಿಸಿದ ಮಾಲ್ಡೀವ್ಸ್​​​ಗೆ ಟಕ್ಕರ್ ನೀಡಲು ಇಸ್ರೇಲ್​​​ ಮುಂದಾಗಿದೆ. ಪ್ರತಿ ಹಂತದಲ್ಲೂ ಭಾರತ ಜತೆಗೆ ನಿಂತಿದ್ದ ಇಸ್ರೇಲ್​​​​​, ಇದೀಗ ಲಕ್ಷದ್ವೀಪ ಅಭಿವೃದ್ಧಿಗೆ ಮಹತ್ವ ಕೊಡುಗೆ ನೀಡಲು ಮುಂದಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ರಾಜತಾಂತ್ರಿಕ ಜಗಳದ ನಡುವೆಯೇ ಭಾರತದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೋಮವಾರ ಭೇಟಿ ನೀಡಿದೆ.

ಇದನ್ನೂ ಓದಿ: ಮಗನ ಹತ್ಯೆ ಮಾಡಿ ಸೂಟ್ ಕೇಸ್​ನಲ್ಲಿ ರವಾನೆ: ಸಿಇಓ ಸುಚನಾ ಅರೆಸ್ಟ್!

ಇಸ್ರೇಲ್ ಜನವರಿ 10ರಿಂದ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಲಕ್ಷದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ವೀಕ್ಷಣೆ ಮಾಡುವ ಅವಕಾಶವನ್ನು ಈ ಯೋಜನೆ ಮಾಡಲಿದೆ. ಈ ದ್ವೀಪದ ಮೋಡಿಮಾಡುವ ಆಕರ್ಷಣೆಯ ಚಿತ್ರಗಳನ್ನು ಇಸ್ರೇಲಿ ರಾಯಭಾರ ಕಚೇರಿ X ನಲ್ಲಿ ಹಂಚಿಕೊಂಡಿದೆ.

RELATED ARTICLES

Related Articles

TRENDING ARTICLES