Monday, December 23, 2024

ಸ್ವ-ನಿಧಿ ಯೋಜನೆಯಡಿ 1 ಲಕ್ಷ ಸಾಲ : ಮಾಜಿ ಸಚಿವ ಎಸ್.ಎ. ರಾಮದಾಸ್

ಶಿವಮೊಗ್ಗ : ಸ್ವ-ನಿಧಿ ಯೋಜನೆಯಡಿ 1 ಲಕ್ಷದವರೆಗೂ ಬಂಡವಾಳ ಸಾಲ ನೀಡಲಾಗುತ್ತದೆ ಎಂದು ಯೋಜನೆಗಳ ಅನುಷ್ಠಾನದ ರಾಜ್ಯ ಉಸ್ತುವಾರಿ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಂ ಸ್ವ-ನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನಕ್ಕೆ ಕುರಿತಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಸ್ಪಂಧನೆ ಸಿಕ್ಕಿದೆ ಎಂದು ಹೇಳಿದ್ದಾರೆ.

2023 ರಿಂದ 28ರ ಅವಧಿಗೆ ಈ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಕೇಂದ್ರ ಸರ್ಕಾರ ಇದಕ್ಕಾಗಿಯೇ 13 ಸಾವಿರ ಕೋಟಿ ಮೀಸಲಿರಿಸಿದೆ. ವಿಶ್ವಕರ್ಮ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದ್ದು, ಆಯ್ಕೆಯಾದವರಿಗೆ 7 ದಿನಗಳ ತರಬೇತಿ ನೀಡಲಾಗುವುದು. ಈ ತರಬೇತಿ ಅವಧಿಯಲ್ಲಿ 500 ರೂ. ಸ್ಟೈಫಂಡ್ ನೀಡಲಾಗುವುದು. ಜೊತೆಗೆ ಇನ್ನೂ 15 ದಿನ ವಿಶೇಷ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

50,000 ಹಾಗೂ 1 ಲಕ್ಷದವರೆಗೆ ಸಾಲ

ಕೋವಿಡ್ ಸಂಕಷ್ಟದ ಬಳಿಕ ಬೀದಿ ಬದಿ ವ್ಯಾಪಾರಿಗಳು ತೊಂದರೆಗೆ ಒಳಗಾದರು. ಅವರಿಗೆ ಆರ್ಥಿಕ ಶಕ್ತಿ ತುಂಬುವ ಹಿನ್ನಲೆಯಲ್ಲಿ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಈಗಾಗಲೇ ಸುಮಾರು 60 ಲಕ್ಷ ಜನರಿಗೆ 11 ಸಾವಿರ ಕೋಟಿ ಬಂಡವಾಳವನ್ನು ನೀಡಲಾಗಿದೆ. ಈ ಯೋಜನೆಯ ಪ್ರಕಾರ ಆರಂಭದಲ್ಲಿ 10 ಸಾವಿರ ಸಾಲ ನೀಡಲಾಗುವುದು. ನಂತರ ಆ ಸಾಲ ತೀರಿದ ಮೇಲೆ 50 ಸಾವಿರ ಹಾಗೂ 1 ಲಕ್ಷದವರೆಗೂ ಬಂಡವಾಳ ಸಾಲ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಗರ್ಭಿಣಿಯರಿಗೆ 5,000 ಬಾಣಂತನಕ್ಕೆ 6,000

ಈ ಯೋಜನೆಯ ಜೊತೆಗೆ ಪ್ರಧಾನಮಂತ್ರಿಗಳ ಜೀವನ್ ಭೀಮ ಯೋಜನೆ, ಸುರಕ್ಷಾ ಯೋಜನೆ, ಪಿಂಚಣಿ ಯೋಜನೆ ಮುಂತಾದ ಯೋಜನೆಗಳನ್ನು ಕೂಡ ತಲುಪಿಸಲಾಗುವುದು. ಅಸಂಘಟಿತ ವಲಯದವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಧನಸಹಾಯ ಮಾಡಲಾಗುವುದು. ಗರ್ಭಿಣಿಯಾದರೆ 5 ಸಾವಿರ, ಬಾಣಂತನಕ್ಕೆ 6 ಸಾವಿರ ಧನ ಸಹಾಯ ನೀಡಲಾಗುವುದು ಎಂದು ಎಸ್.ಎ.ರಾಮದಾಸ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES