Sunday, January 19, 2025

ದೇವೇಗೌಡ, ಚೆನ್ನಮ್ಮರ ಹೊಟ್ಟೆಯಲ್ಲಿ ಎಂಥ ಮಕ್ಕಳು ಹುಟ್ಟಿಬಿಟ್ರು : ಎ.ಟಿ ರಾಮಸ್ವಾಮಿ ಕಿಡಿ

ಹಾಸನ : ಸಿನಿಮಾದಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಹೀರೋ‌ ಅಂತಾರೆ. ಅದೇ ಸಿನಿಮಾದಲ್ಲಿ ಕೆಟ್ಟವರಿದ್ರೆ ಖಳನಾಯಕ ಅಂತಾರೆ. ಅಂಥ ವಿಲನ್ ಪಾತ್ರ ಮಾಡಿಕೊಂಡೇ ಇಲ್ಲಿಯವರೆಗೆ ಬಂದಿದ್ದೀರಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಾಜಿ ಶಾಸಕ ಎ.ಟಿ‌ ರಾಮಸ್ವಾಮಿ ಕಿಡಿಕಾರಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಲ್ಲೇ ಇದ್ದುಕೊಂಡು ನಿಮ್ಮನ್ನ ವಿರೋಧಿಸಿಕೊಂಡು ಬಂದಿದ್ದೆ. ಈಗ ಎಲ್ಲರಿಗೂ ಗೊತ್ತಾಗಿದೆ, ಹೋರಾಡಲು ಬಂದಿದ್ದಾರೆ. ಅಂತಹ ಮುತ್ಸದಿ ದೇವೇಗೌಡ,‌ ಚೆನ್ನಮ್ಮರ‌ ಹೊಟ್ಟೆಯಲ್ಲಿ ಎಂತಹವರು ಹುಟ್ಟಿಬಿಟ್ರು ಎಂದು ಹರಿಹಾಯ್ದಿದ್ದಾರೆ.

ದೇವೇಗೌಡರು ಉತ್ಸವ ಮೂರ್ತಿ ಇದ್ದ ಹಾಗೆ. ಹೊತ್ತರೆ ಹೆಗಲ ಮೇಲೆ, ಇಳಿಸಿದ್ರೆ ಕೆಳಗೆ ಇರ್ತಾರೆ ಅಂತಹವರು ಅವರು. ಇವರು ಅವರ ಹೊಟ್ಟೆಯಲ್ಲಿ ಹುಟ್ಟಿ ಕಳಂಕ ತಂದಿದ್ದಾರೆ. ಅಂತಹ ತಂದೆ, ತಾಯಿಗೆ ನೋವು ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅವ್ರು ಬೆಂಗಳೂರು, ಇವ್ರು ಹೊಳೆನರಸೀಪುರ

ಹಾಸನದ ರಾಜಕೀಯದಲ್ಲಿ ಅನೇಕ ಒಳ್ಳೆಯ ರಾಜಕೀಯ ನಾಯಕರು ಹುಟ್ಟಿದ್ದಾರೆ. ಆದ್ರೆ, ಇಂತಹ ಮಣ್ಣಿನಲ್ಲಿ ಇಂತಹ ಕಳಂಕಿತರು ಹುಟ್ಟಿದ್ದಾರಲ್ಲಾ..! ಈಗಲಾದರೂ ತಪ್ಪಾಗಿದೆ ಎಂದು ಒಪ್ಪಿಕೊಳ್ಳಲಿ. ಇಷ್ಟೆಲ್ಲಾ ಮಾಡಿದ್ರೂ ರೇವಣ್ಣ ಏನು ನೆಮ್ಮದಿಯಾಗಿದ್ದಾರಾ? ಅವರ ನೆಮ್ಮದಿ ಎಲ್ಲರಿಗೂ ಗೊತ್ತಿದೆ. ಒಬ್ರು ಬೆಂಗಳೂರಿನಲ್ಲಿ ಇದ್ರೆ, ಇನ್ನೊಬ್ರು ಹೊಳೆನರಸೀಪುರದಲ್ಲಿ ಇರ್ತಾರೆ. ಅವರು ಎಷ್ಟು ನೆಮ್ಮದಿಯಾಗಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ಎ.ಟಿ‌ ರಾಮಸ್ವಾಮಿ ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES