Sunday, December 22, 2024

ನಾನು ಕೋಪ ಮಾಡ್ಕೊಳ್ಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ : ಸಿನಿಮಾ ಸ್ಟೈಲ್​ನಲ್ಲೇ ದರ್ಶನ್ ಟಕ್ಕರ್

ಬೆಂಗಳೂರು : ನಟ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಯಶಸ್ಸಿನ ನಾಗಾಲೋಟ ಮುಂದುವರಿದಿದೆ. ಈ ನಡುವೆಯೇ ತಮ್ಮ ಹಾಗೂ ಆಪ್ತ ಬಳಗದ ವಿರುದ್ಧದ ಪಿತೂರಿ ಬಗ್ಗೆ ಪ್ರತಿಕ್ರಿಯಿಸಿರುವ ‘ಡಿ ಬಾಸ್’ ದುಷ್ಟಕೂಟಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಡಿ ಬಾಸ್​ ದರ್ಶನ್, ‘ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ’ ಎಂದು ಹೇಳಿದ್ದಾರೆ.

ಕಾಲಾಯ ತಸ್ಮಯ್ ನಮಃ ಎಂದಿದ್ದೇಕೆ ದರ್ಶನ್

ಮುಂದುವರಿದು, ಕಾಟೇರ ಚಿತ್ರದ ಸಕ್ಸಸ್ ಸಹಿಸದೇ ಪಿತೂರಿ ಮಾಡಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿರುವ ವಿರೋಧಿಗಳಿಗೆ ಕೂಲ್ ಆಗಿಯೇ ಟಕ್ಕರ್ ಕೊಟ್ಟಿದ್ದಾರೆ. ‘ನನ್ನ ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು..! ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ..’ ಎಂದು ತಮ್ಮ ಸ್ಟೈಲ್​ನಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಟೈಗರ್ ಜೊತೆ ಸಮಯ ಕಳೆದ ‘ಡಿ ಬಾಸ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ 100 ಕೋಟಿ ಕ್ಲಬ್ ಸೇರಿ ಧೂಳೆಬ್ಬಿಸಿದೆ. ಇನ್ನೂ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅಬ್ಬರಿಸುತ್ತಿದೆ. ದುಬೈನಲ್ಲಿ ‘ಕಾಟೇರ’ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣ್ತಿದ್ದು, ಇಡೀ ಚಿತ್ರತಂಡ ಖುಷಿಯಾಗಿದೆ. ಇನ್ನು, ಪ್ರಾಣಿ ಪ್ರಿಯರಾಗಿರುವ ನಟ ದರ್ಶನ್ ದುಬೈ ಪ್ರವಾಸದಲ್ಲಿ ಹುಲಿ ಹಾಗೂ ಹಾವಿನ ಜೊತೆ ಸಮಯ ಕಳೆದಿದ್ದಾರೆ.

RELATED ARTICLES

Related Articles

TRENDING ARTICLES