Wednesday, January 22, 2025

ಸಿದ್ದರಾಮಯ್ಯಗೆ ಸಾಬ್ರು ಮೇಲೆನೇ ಲವ್ : ಶಾಸಕ ಯತ್ನಾಳ್

ವಿಜಯಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೀ ಸಾಬ್ರು ಮೇಲೆಯೇ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಲೇವಡಿ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅರೆ ಹುಚ್ಚ ಎಂದು ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಪ್ರಧಾನಿ ಮಂತ್ರಿಯಾಗಲು ಯಾರಿದ್ದಾರೆ ಹೇಳಿ..? ಮಲ್ಲಿಕಾರ್ಜುನ ಖರ್ಗೆ ಬೇಡ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಲಿತರ ಮೇಲೆ ಸಿದ್ದರಾಮಯ್ಯರಿಗೆ ಎಷ್ಟು ಪ್ರೀತಿ ಇದೆ ನೋಡಿ. ಇವರಿಗೆ ಸಾಬ್ರು ಮೇಲೆಯೇ ಹೆಚ್ಚು ಲವ್ ಎಂದು ಕುಟುಕಿದ್ದಾರೆ.

ಪೊಲೀಸರ ಮೇಲೆ ಗೂಂಡಾಗಿರಿ ಮಾಡಿದ್ದಾರೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಆರೋಪಿ ಕುಟುಂಬದವರು ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ಡಿಕೆಶಿ ಭೇಟಿ ಮಾಡಿ ‘ಹಮಾರೆ ಚೋಕರೆ ಕುಚ್ ಬಿ ನಹಿ ಕಿಯಾ, ಗರ್ ಬೈಟಾತಾ ಕೊತಂಬರಿ ಲೇಕೆ ಆನೆ ಕೆ ಲಿಯೇ ಗಯಾ ತಾ.. ಪಕಡ್ ಲಿಯೆ ಅಂದರ್ ಡಾಲ್ ದಿಯೆ’ಎಂದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ, ಪೊಲೀಸ್ ಜೀಪ್ ಸುಟ್ಟಿದ್ದಾರೆ. ಪೊಲೀಸರ ಮೇಲೆ ಗೂಂಡಾಗಿರಿ ಮಾಡಿದ್ದಾರೆ, ದೇಶ ಹೇಗೆ ಸುರಕ್ಷಿವಾಗಿರೋಕೆ ಸಾಧ್ಯ? 9 ವರ್ಷದಿಂದ ದೇಶ ಸುರಕ್ಷಿತವಾಗಿ ಉಳಿದಿದ್ದೆ‌ ಮೋದಿಯವರಿಂದ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES