Sunday, January 19, 2025

ಬೆಂಗಳೂರು ಕೇಂದ್ರ ಲೋಕಸಭಾ ‘ಕೈ’ ಟಿಕೆಟ್​ಗೆ ಕ್ರಿಶ್ಚಿಯನ್ನರ ಬೇಡಿಕೆ

ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿನ ಮತದಾರರಲ್ಲಿ ಕ್ರಿಶ್ಚಿಯನ್ನರ ಪಾಲು ಅಧಿಕವಾಗಿದೆ. ಈ ಹಿನ್ನೆಲೆ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಅನ್ನು ಕ್ರಿಶ್ಚಿಯನ್ನರಿಗೆ ನೀಡಬೇಕೆಂದು ಕ್ರಿಶ್ಚಿಯನ್​​ ಸಮುದಾಯದವರು ಒತ್ತಾಯಿಸಿದ್ದಾರೆ.

ಸಮುದಾಯದ ಮುಖ್ಯಸ್ಥರು ಇಂದು ಬೆಂಗಳೂರಿನ ಖಾಸಗಿ ಹಾಲ್​ನಲ್ಲಿ ಸಭೆ ನಡೆಸಿ ಕಾಂಗ್ರೆಸ್ ನಾಯಕರಿಗೆ ಮಾನವಿ ಮಾಡಿದ್ದಾರೆ. ಇನ್ನು ಸಮುದಾಯದ ಮುಖಂಡ ಬಾಥ್ರೋಲಮ್​​​ ಇವರಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಪಕ್ಷ ಈ ಬಾರಿ ಬೆಂಗಳೂರು ಕೇಂದ್ರ ಕ್ಷೇತ್ರವನ್ನು ಗೆಲ್ಲುವ ಸಾಧ್ಯತೆ ಇದೆ. ನಮ್ಮ ಸಮುದಾಯಕ್ಕೆ ಒಂದು ಟಿಕೆಟ್ ಕೊಡಿ ಅಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ಮಾನವಿ ಮಾಡ್ತೀವಿ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.

ಒಂದು ವೇಳೆ ಟಿಕೆಟ್ ನೀಡಿದ್ರೆ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರಿಸ್ತೀವಿ. ಕಳೆದ 15 ವರ್ಷಗಳ ಹಿಂದೆ ಸಾಂಗ್ಲಿಯಾನರನ್ನು ಗೆಲ್ಲಿಸಿಕೊಂಡು ಬಂದಿದ್ವಿ. ಈ ಬಾರಿಯೂ ಕೂಡ ಕ್ರಿಶ್ಚಿಯನ್ ಸಮುದಾಯದ ಭಾಥ್ರೋಲಮ್​ ಅವರಿಗೆ ಟಿಕೆಟ್ ನೀಡಿದ್ರೆ ಗೆಲುವು ಗ್ಯಾರಂಟಿ ಅಂತ ಸಮುದಾಯದ ಮುಖಂಡರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES