Sunday, December 22, 2024

ಮೋದಿ ಪ್ರಧಾನಿ ಆಗದಿದ್ರೆ ನನ್ನ ಕುಟುಂಬ ಉಳಿಯಲ್ಲ : ಶಾಸಕ ಯತ್ನಾಳ್

ವಿಜಯಪುರ : ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗದಿದ್ದರೆ ನನ್ನ ಕುಟುಂಬವೇ ಉಳಿಯುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದ ಸಲುವಾಗಿ, ಮೋದಿ ಅವರನ್ನು ಪ್ರಧಾನಿ ಮಾಡಲು ನಾನು ಕೆಲಸ ಮಾಡುತ್ತಿರುವೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅಂತಹ ಅರೆ ಹುಚ್ಚ ಪ್ರಧಾನಿ ಆದರೆ ಹೇಗೆ? ನರೇಂದ್ರ ಮೋದಿ ಅಂಥವರು, ಯೋಗಿ ಆದಿತ್ಯನಾಥ ಅಂಥವರು ದೇಶದ ಪ್ರಧಾನಿ ಆದರೆ ಮಾತ್ರ ನಾವು ಸುರಕ್ಷಿತವಾಗಿ ಇರಲು ಸಾಧ್ಯ. ಗಾಂಧಿ, ನೆಹರು ಕೂಡಿ ಪಾಕಿಸ್ತಾನ ಯಾಕೆ ಕೊಟ್ಟರು? ಇಲ್ಲಿ ನೀವು ಇರುವುದು ಹಿಂದೂಗಳ ದಯಾಮಯದಿಂದ, ಸುಮ್ಮನೆ ಇರಬೇಕು. ಮೋದಿ ಅವರು ಬಂದ ಮೇಲೆ ಎಲ್ಲಾದರೂ ಭಯೋತ್ಪಾದನಾ ದಾಳಿಗಳಾಗಿವೆಯಾ..? ಎಂದು ಪ್ರಶ್ನಿಸಿದರು.

ವಿಜಯೇಂದ್ರ ಅವರ ಜಾಲತಾಣದಲ್ಲಿ ಯಡಿಯೂರಪ್ಪನವರೇ ಯತ್ನಾಳ ಅವರನ್ನು ಬಿಜೆಪಿಗೆ ವಾಪಸ್ ಕರೆದುಕೊಂಡರು ಎಂಬ ಪೋಸ್ಟ್ ವಿಚಾರದ ಬಗ್ಗೆ ಮಾತನಾಡಿ, ಯಡಿಯೂರಪ್ಪನವರು ನನ್ನ ಬಿಜೆಪಿಗೆ ತೆಗೆದುಕೊಂಡಿದ್ದಲ್ಲ. ಅಂದಿನ‌ ರಾಷ್ಟಯ ಅಧ್ಯಕ್ಷರಾದ ಅಮೀತ್ ಶಾ ಅವರು ಕರೆದು ನನಗೆ ಬಿಜೆಪಿಗೆ ತೆಗೆದುಕೊಂಡರು. ಅಂದು ಬಿಜೆಪಿ ಯಲ್ಲಿ ತೆಗೆದುಕೊಳ್ಳಲು ಯಡಿಯೂರಪ್ಪ ವಿರೋಧ ಮಾಡಿದ್ರು ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪರಿಂದ ನಾನು ಬಿಜೆಪಿಗೆ ಬಂದಿಲ್ಲ

ಸದಾನಂದಗೌಡ ಹಾಗೂ ಯಡಿಯೂರಪ್ಪನವರಿಂದ ನಾನು ಬಿಜೆಪಿಗೆ ಬಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ, ಮೋದಿ ಅವರು ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ‌ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನ‌ಮಂತ್ರಿ ಮಾಡಲು ಕೆಲಸ ಮಾಡುತ್ತೇವೆ‌. ಲೊಕಸಭಾ ಚುನಾವಣೆಯಲ್ಲಿ ನಾನು ವಿಜಯೇಂದ್ರ, ಯಡಿಯೂರಪ್ಪನವರಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಯತ್ನಾಳ್ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES