Saturday, January 4, 2025

ಮೀನಿಗೆ ಹಾಕಿದ ಗಾಳದಲ್ಲಿ ಸಿಕ್ತು ಮಹಿಳೆಯ ಮೂಳೆ!

ಆನೇಕಲ್: ಮೀನಿಗೆ ಹಾಕಿದ ಗಾಳದಲ್ಲಿ ಅಪರಿಚಿತ ಮಹಿಳೆಯ ಮೂಳೆಗಳು ಸಮಂದೂರು ಗ್ರಾಮದ ತಿಮ್ಮಸಂದ್ರ ಕೆರೆಯಲ್ಲಿ ಪತ್ತೆಯಾಗಿವೆ.

ಗ್ರಾಮದ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಮೂಟೆಯೊಂದು ಸಿಕ್ಕಿದೆ. ಮಹಿಳೆಯನ್ನು ಹತ್ಯೆ ಮಾಡಿ ಕಲ್ಲಿನ ಜತೆಗೆ ಮೂಟೆಯಲ್ಲಿ ಕಟ್ಟಿ ಕೆರೆಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಯುವಕರು ನಿನ್ನೆ ಭಾನುವಾರ ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಮೀನಿನ ಗಾಳಕ್ಕೆ ಮೂಟೆ ಸಿಕ್ಕಿಹಾಕಿಕೊಂಡಿದೆ.

ಬೃಹತ್‌ ಮೀನು ಇರಬೇಕೆಂದು ಎಳೆದು ನೋಡಿದಾಗ ಮೂಟೆ ಸಿಕ್ಕಿದೆ. ಮೂಟೆ ಮೇಲೆತ್ತಿ ನೋಡಿದಾಗ ಮೂಳೆಗಳು ಪತ್ತೆ ಆಗಿವೆ. ಜತೆಗೆ ಮೂಟೆಯ ಒಳಗೆ ಇಟ್ಟಿಗೆ ತುಂಡುಗಳನ್ನು ಹಾಕಿ ನೀರಿನಲ್ಲಿ ಬಿಡಲಾಗಿದೆ. ಜತೆಗೆ ಮಹಿಳೆಯ ತಲೆ ಕೂದಲು, ದೇಹದ ಮೂಳೆಗಳು ಹಾಗೂ ಸೀರೆ ಜತೆಗೆ ತಲೆಗೆ ಹಾಕುವ ಕ್ಲಿಬ್, ಕೈಬಳೆಗಳು ಪತ್ತೆಯಾಗಿದೆ.

ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಹಾರಾಷ್ಟ್ರದ ಮೇಲೆ ವ್ಯಾಮೋಹ ಹೆಚ್ಚಾಗಿದೆ: ಹೆಎಚ್​ಡಿಕೆ ತರಾಟೆ!

ಮಹಿಳೆಯ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ನೀರಿನಲ್ಲಿ ಬಿಟ್ಟಿರುವ ಸಾಧ್ಯತೆ ಇದೆ. ಹಲವು ತಿಂಗಳುಗಳ ಹಿಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿರಬೇಕೆಂದು ಅಂದಾಜಿಸಲಾಗಿದೆ. ಸದ್ಯ ಯುವಕರು ಅತ್ತಿಬೆಲೆ ಪೊಲೀರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

RELATED ARTICLES

Related Articles

TRENDING ARTICLES