Tuesday, December 24, 2024

Bengaluru Chitra Santhe: ಚಿತ್ರಸಂತೆಗೆ ಬೆಂಗಳೂರು ಸಜ್ಜು: 22 ರಾಜ್ಯಗಳ ಸಾವಿರಾರು ಕಲಾಕೃತಿ ಪ್ರದರ್ಶನ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇಂದು ಚಿತ್ರಸಂತೆ ಆರಂಭಕ್ಕೆ ಕ್ಷಣಗಣನೇ ಶುರುವಾಗಿದ್ದು, ಈ  ದಿನವನ್ನು ಹಬ್ಬದಂತೆ ಆಚರಿಸುತ್ತಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ (ಸಿಕೆಪಿ)ವತಿಯಿಂದ 21ನೇ ಚಿತ್ರಸಂತೆ (21st Chitra Santhe) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 22 ರಾಜ್ಯಗಳ ಸಾವಿರಾರು ಕಲಾಕೃತಿ ಪ್ರದರ್ಶನವಾಗಲಿದೆ.

ನಗರದ ಕುಮಾರಕೃಪಾ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು, ರಸ್ತೆಗಳಲ್ಲಿ ಶನಿವಾರವೇ ಚಿತ್ರ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ ‘ಚಿತ್ರಸಂತೆ’ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9 ಗಂಟೆಗೆ ‘ಚಿತ್ರಸಂತೆ’ಗೆ ಅಧಿಕೃತ ಚಾಲನೆ ನೀಡಲಿದ್ದಾರೆ

ಈ ಬಾರಿಯ ಚಿತ್ರಸಂತೆಯನ್ನು ‘ಬಾಹ್ಯಾಕಾಶಯಾನ’ದಲ್ಲಿ ಸಾಧನೆಗೈದ ಇಸ್ರೋ ವಿಜ್ಞಾನಿಗಳಿಗೆ ಸಮರ್ಪಿಸಲಾಗುತ್ತಿದೆ.

22 ರಾಜ್ಯಗಳ 40 ಸಾವಿರಕ್ಕೂ ಹೆಚ್ಚು ಕಲಾಕೃತಿ

ಇಂದಿನ ಚಿತ್ರಸಂತೆಯಲ್ಲಿ ದೇಶದ ನಾನಾ ಮೂಲೆಗಳಿಂದ ಕಲಾವಿದರು ಆಗಮಿಸಲಿದ್ದಾರೆ. ಆ ಕಲಾವಿದರ ಚಿತ್ರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಸುಮಾರು 22 ರಾಜ್ಯಗಳಿಂದ ಒಟ್ಟು 1500 ಕಲಾವಿದರೂ ಚಿತ್ರಸಂತೆಗೆ ಆಗಮಿಸಲಿದ್ದಾರೆ. ಬರೋಬ್ಬರಿ 40,000 ಕ್ಕೂ ಅಧಿಕ ಕಲಾಕೃತಿಗಳು ಚಿತ್ರಸಂತೆಗೆ ಬಂದಿವೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು (CKCP) ಮಾಹಿತಿ ನೀಡಿದೆ.

ಚಿತ್ರಸಂತೆ ಪ್ರಯುಕ್ತ ಇಂದು ಕುಮಾರಕೃಪಾ ರಸ್ತೆ, ದೇವರಾಜು ಅರಸು ರಸ್ತೆ, ಹರೇಕೃಷ್ಣ ರಸ್ತೆ, ಕುಮಾರಕೃಪಾ ರೈಲ್ವೆ ಸಮಾನಾಂತರ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳ ಬದಿ ಕಲಾಕೃತಿಗಳ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿಗಿಂತ ಈ ಸಲ 300 ಮಳಿಗೆಗಳು ಅಧಿಕ ಅಂದರೆ 1500 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಲಕ್ಷಾಂತರ ಜನರು ಇಂದು ಚಿತ್ರಸಂತೆಗೆ ಆಗಮಿಸುವ ನಿರೀಕ್ಷೆ

ಲಕ್ಷಾಂತರ ಜನರು ಇಂದು ಚಿತ್ರಸಂತೆಗೆ ಆಗಮಿಸುವ ನಿರೀಕ್ಷೆ ಇದೆ. ಬಗೆ ಬಗೆಯ ಚಿತ್ರಕಲೆಗಳು, ಕಲಾಕೃತಿಗಳು, ಗೃಹ ಉಪಯೋಗಿ ವಸ್ತುಗಳನ್ನು ಜನ ಖರೀದಿ

ಲಿದ್ದಾರೆ. ತಿಂಡಿ ತಿನಿಸುಗಳನ್ನು ಸವಿಯಲಿದ್ದಾರೆ. ಶಿವಾನಂದ ವೃತ್ತದ ಸುತ್ತಮುತ್ತ ಸಹಸ್ರ ಸಂಖ್ಯೆಯಲ್ಲಿ ಜನರ ದಂಡ ತುಂಬಿಕೊಂಡಿರುತ್ತದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು 11ಗಂಟೆಗೆ ‘ಚಿತ್ರಸಂತೆ’ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಾಸಕರು, ಸಿಕೆಪಿ ಮುಖ್ಯಸ್ಥರು, ಕಲಾವಿದರು ಉಪಸ್ಥಿತರಿರಲಿದ್ದಾರೆ.

 

 

 

RELATED ARTICLES

Related Articles

TRENDING ARTICLES