Monday, December 23, 2024

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 10 ಡಬಲ್ ಡೆಕ್ಕರ್ ಬಸ್‌ ಸಂಚಾರ!

ಬೆಂಗಳೂರು : 10 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್​​ಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುವ ಸೂಚನೆಯನ್ನು ಸರ್ಕಾರ ನೀಡಿದ್ದು ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ ಖರೀದಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈಗಾಗಲೇ ಡಬಲ್​ ಡೆಕ್ಕರ್​​ ಬಸ್​ಗಳಿಗೆ ಟೆಂಡರ್​ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್​ ಪೂರ್ಣವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಡಬಲ್ ಡೆಕ್ಕರ್ ಬಸ್‌ಗಳಿಗೆ ಅಂಡರ್‌ಪಾಸ್‌ ಮತ್ತು ಇತರ ಅಡೆತಡೆಗಳಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದಕ್ಕಾಗಿ ಈಗಾಗಲೇ ಐದು ಮಾರ್ಗಗಳನ್ನ ರೂಪಿಸಲಾಗಿದೆ. ಈ ಡಬಲ್​ ಡೆಕ್ಕರ್​ ಬಸ್​ಗಳಿಗೆ ಬಿಎಂಟಿಸಿ ಬಸ್​ನ ಬಣ್ಣವನ್ನೇ ಅಂತಿಮಗೊಳಿಸಲಾಗಿದೆ. ಆದರೆ ಡಬಲ್​ ಡೆಕ್ಕರ್​​ ಬಸ್​ ವಿನ್ಯಾಸದ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಅಂತರಾಷ್ಟ್ರೀಯ ಬಾಣಸಿಗನಿಂದ 7 ಸಾವಿರ ಕೆಜಿ ರಾಮಹಲ್ವಾ!

ಜಪಾನ್​ ಡಬಲ್​ ಡೆಕ್ಕರ್​ ಬಸ್​ ಮಾದರಿಯನ್ನು ನನ್ನ ಆಪ್ತರು ಕಳಿಸಿದ್ದು, ಅದನ್ನು ಸಹ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕಳಿಸಿದ್ದೇನೆ ಎಂದಿದ್ದಾರೆ. ಅಲ್ಲದೇ 120 ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್​​ ಕರೆಯಲಾಗಿದೆ. ಬಸ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಪ್ಯಾಸೆಂಜರ್ ಡಿಸ್‌ಪ್ಲೇ ಬೋರ್ಡ್‌ಗಳು, ಸಿಸಿಟಿವಿ ವ್ಯವಸ್ಥೆಗಳು ಮತ್ತು ಪ್ಯಾನಿಕ್ ಬಟನ್‌ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಫೆಬ್ರವರಿ 13 ರಂದು ಟೆಂಡರ್ ಪ್ರಾರಂಭವಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES