Monday, December 23, 2024

ವಂಚನೆ ಪ್ರಕರಣ: ಇಬ್ಬರ ವಿರುದ್ದ ದೂರು ದಾಖಲಿಸಿದ ಮಹೇಂದ್ರ ಸಿಂಗ್ ಧೋನಿ!

ರಾಂಚಿ : ತಮಗೆ 16ಕೋಟಿ ರೂ ವಂಚನೆ ಮಾಡಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಬ್ಬರ ವಿರುದ್ದ ಕ್ರಿಮಿನಲ್​ ಪ್ರಕರಣವನ್ನು ರಾಂಚಿಯ ಕೆಳ ನ್ಯಾಯಾಲಯದಲ್ಲಿ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ‘ಅರ್ಕಾ ಸ್ಪೋರ್ಟ್ ಅಕಾಡೆಮಿ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ ವಿರುದ್ಧ ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಹಾಗೂ 420 (ವಂಚನೆ) ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಧೋನಿ ಪರ ವಕೀಲ ಹಾಗೂ ಕಾನೂನು ಸಲಹಾ ಸಂಸ್ಥೆ ‘ವಿಧಿ ಅಸೋಸಿಯೇಷನ್ಸ್’ನ ದಯಾನಂದ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಸೀರಿಯಲ್ ಸೀತಾರಾಮರಿಗೆ ಆಹ್ವಾನ ನೀಡಿದ ಟ್ರಸ್ಟ್​!

‘2017ರಲ್ಲಿ ಧೋನಿ ಅವರನ್ನು ಭೇಟಿಯಾಗಿದ್ದ ಆರೋಪಿಗಳು, ಭಾರತ ಹಾಗೂ ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯುವಂತೆ ಕೇಳಿದ್ದರು. ಆರಂಭದಲ್ಲಿ ನಡೆದ ಮಾತುಕತೆ ವೇಳೆ, ಧೋನಿ ಹೆಸರಿನಲ್ಲಿ ಅಕಾಡೆಮಿ ತೆರೆಯಲು ಫ್ರಾಂಚೈಸಿ ಮೊತ್ತ ಭರಿಸುವುದಾಗಿ ಹಾಗೂ ಆದಾಯವನ್ನು 70:30ರ ಅನುಪಾತದಲ್ಲಿ ಹಂಚಿಕೊಳ್ಳುವುದಾಗಿ ಅವರು ಕರಾರು ಮಾಡಿಕೊಂಡಿದ್ದರು. ಆದರೆ, ಅದಾದ ನಂತರ ಧೋನಿಗೆ ಹಣ ಪಾವತಿಸದೆ ಮತ್ತು ವಿಚಾರ ತಿಳಿಸದೆ ಅಕಾಡೆಮಿ ಸ್ಥಾಪನೆಗೆ ಸಿದ್ಧತೆ ಆರಂಭಿಸಿದ್ದರು. ಹೀಗಾಗಿ ಅವರಿಗೆ ನೀಡಿದ್ದ ಹಕ್ಕು ಪತ್ರವನ್ನು 2021ರ ಆಗಸ್ಟ್ 15ರಂದು ಹಿಂಪಡೆಯಲಾಗಿತ್ತು ಎಂದು ದಯಾನಂದ್ ತಿಳಿಸಿದ್ದಾರೆ.

ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದಿವಾಕ‌ರ್ ಮತ್ತು ಬಿಸ್ವಾಸ್ ಅವರಿಗೆ ಎರಡು ಬಾರಿ ನೋಟಿಸ್ ಕಳುಹಿಸಲಾಗಿತ್ತು. ಅವರು ಧೋನಿ ಬಳಿ ಹಣ ಪಡೆದು ಎಂಟರಿಂದ ಹತ್ತು ಕಡೆ ಅಕಾಡೆಮಿ ತೆರೆದಿದ್ದಾರೆ. ಇದರಿಂದ ಧೋನಿಗೆ ₹ 16 ಕೋಟಿ ನಷ್ಟವಾಗಿದೆ’ ಎಂದು ವಿವರಿಸಿದ್ದಾರೆ.

RELATED ARTICLES

Related Articles

TRENDING ARTICLES