ಬೆಂಗಳೂರು: ಚಿಂತಾಮಣಿಯ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಆಹಾರದಲ್ಲಿ ಮಲ ಬೆರೆತಿರುವ ಪ್ರಕರಣ ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಲಜ್ಜೆಗೇಡಿತನಕ್ಕೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಲ್ಯಾಬ್ ರಿಪೋರ್ಟ್ ಹಂಚಿಕೊಂಡು ಪೋಸ್ಟ್ ಮಾಡಿರುವ ಅವರು, “ಪ್ರಕರಣದ ಲ್ಯಾಬ್ ವರದಿ ಆಗಸ್ಟ್ ತಿಂಗಳಿನಲ್ಲೇ ಬಂದಿದ್ದರು, 4 ತಿಂಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟು ಲಜ್ಜೆಗೆಟ್ಟಿರಬಹುದು” ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕಬಡ್ಡಿ ಪಂದ್ಯದ ವೇಳೆ ಯುವಕನ ಮೇಲೆ ಹಲ್ಲೆ
“ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದು ಬದುಕಿದ್ದಿದ್ದರೆ ಈ ದಲಿತ ವಿರೋಧಿ ಸರ್ಕಾರವನ್ನು ನೋಡಿ ಬಹುಶಃ ಕಣ್ಣೀರಿಡುತ್ತಿದ್ದರು ಅಲ್ಲವೇ ಸಚಿವ ಹೆಚ್ ಸಿ ಮಹದೇವಪ್ಪ ಅವರೇ” ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಚಿಂತಾಮಣಿಯ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಆಹಾರದಲ್ಲಿ ಮಲ ಬೆರೆತಿರುವ ಪ್ರಕರಣ ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತಿದೆ.
ಈ ಪ್ರಕರಣದ ಲ್ಯಾಬ್ ವರದಿ ಆಗಸ್ಟ್ ತಿಂಗಿಳಿನಲ್ಲೇ ಬಂದಿದ್ದರು, 4 ತಿಂಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಈ ಲಜ್ಜೆಗೆಟ್ಟ @INCKarnataka
ಸರ್ಕಾರ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದು… pic.twitter.com/IWsGw1VxiO
— R. Ashoka (ಆರ್. ಅಶೋಕ) (@RAshokaBJP) January 5, 2024