Tuesday, December 3, 2024

ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ ‘ಕಾಂಗ್ರೆಸ್’ : ಯತ್ನಾಳ್ ವ್ಯಂಗ್ಯ

ವಿಜಯಪುರ : ಕರಸೇವಕರು ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ಹಳೇ ಪ್ರಕರಣ ಮತ್ತೆ ಕೈಗೆತ್ತಿಕೊಂಡಿರುವ ಕಾಂಗ್ರೆಸ್​ ನಡೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ = ಹಿಂದೂ ವಿರೋಧಿ. ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ ‘ಕಾಂಗ್ರೆಸ್’ ಎಂದು ಲೇವಡಿ ಮಾಡಿದ್ದಾರೆ.

ತನಿಖೆಯಾಗಿರುವ ಪ್ರಕರಣವನ್ನು ಮಾರು ತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಕರ್ನಾಟಕ ಪೋಲೀಸರ ಈಗಿನ ಕೆಲಸ ಆಗಿದೆ. ಲೋಕಸಭಾ ಚುನಾವಣೆ ಸೋಲುವ ಹತಾಶೆಯಿಂದ ಸಿಎಂ ಸಿದ್ದರಾಮಯ್ಯನವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಛೇಡಿಸಿದ್ದಾರೆ.

ರಾಮಮಂದಿರದ ಬಗ್ಗೆ ಯೋಚಿಸಿ ಮಾತಾಡಿ

ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತದೆ ಎಂದು ಕಾಂಗ್ರೆಸ್​ಗೆ ಈಗಾಗಲೇ ಮನವರಿಕೆ ಆಗಿದೆ. ಶ್ರೀ ರಾಮ ದೇವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಿ ಇನ್ನಷ್ಟು ಸೀಟುಗಳನ್ನು ಉಡುಗೊರೆ ಕೊಡಬಾರದು ಎಂದು ‘ರಾಮಮಂದಿರ ವಿಚಾರದಲ್ಲಿ ಯೋಚಿಸಿ ಮಾತನಾಡುವಂತೆ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್’ (ಸೂಚನೆ) ಫರ್ಮಾನನ್ನು ಹೊರಡಿಸಿದೆ ಎಂದು ಯತ್ನಾಳ್ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES