Monday, December 23, 2024

ಬುಮ್ರಾ ಮ್ಯಾಜಿಕ್.. 176 ರನ್​ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್

ಬೆಂಗಳೂರು : ಹರಿಣಗಳ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ ವೇಗಿ ಬುಮ್ರಾ ತೂಫಾನ್ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಕೇಪ್​ಟೌನ್​ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ತಂಡ 176 ರನ್​ಗಳಿಗೆ ಆಲೌಟ್​ ಆಗಿದೆ. ಭಾರತದ ಗೆಲುವಿಗೆ ಕೇವಲ 79 ರನ್​ ಬೇಕಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟರ್ ಐಡೆನ್ ಮಾರ್ಕ್ರಾಮ್ ಶತಕ (106) ಸಿಡಿಸಿ ಮಿಂಚಿದರು. ಉಳಿದಂತೆ ಯಾವ ಬ್ಯಾಟರ್​ಗಳು ಸಹ ಉತ್ತಮ ಪ್ರದರ್ಶನ ನೀಡಲಿಲ್ಲಿ.

ನಾಯಕ ಡೀನ್ ಎಲ್ಗರ್ 12, ಡೇವಿಡ್ ಬೆಡಿಂಗ್‌ಹ್ಯಾಮ್ ಹಾಗೂ ಮಾರ್ಕೋ ಯಾನ್ಸನ್​ 11, ಕೈಲ್ ವೆರ್ರೆನ್ನೆ 9, ನಾಂಡ್ರೆ ಬರ್ಗರ್ 6, ಟೋನಿ ಡಿ ಝೋರ್ಝಿ 1, ಟ್ರಿಸ್ಟಾನ್ ಸ್ಟಬ್ಸ್ 1, ಕಗಿಸೊ ರಬಾಡ 2, ಕೇಶವ್ ಮಹಾರಾಜ್ 3 ರನ್ ಗಳಿಸಿದರು. ಭಾರತದ ಪರ ಜಸ್​ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದರು. ಮುಕೇಶ್ ಕುಮಾರ್ 2, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES