Friday, January 17, 2025

ನಿಮ್ಮ ಅಪ್ಪನ ಲುಂಗಿ ಹಿಡ್ಕೊಂಡು ರಾಜಕಾರಣಕ್ಕೆ ಬಂದಿದ್ದೀಯ ನೀನು : ಮುತಾಲಿಕ್ ಕಿಡಿ

ಹುಬ್ಬಳ್ಳಿ : ನಿಮ್ಮ ತಂದೆಯ ಲುಂಗಿ ಹಿಡಿದುಕೊಂಡು ರಾಜಕಾರಣಕ್ಕೆ ಬಂದಿದ್ದೀಯ ನೀನು. ನಮ್ಮದು ಹಿಂದೂ ರಾಷ್ಟ್ರ ಇದೆ, ಹಿಂದೂ ರಾಷ್ಟ್ರ ಆಗೇ ಆಗುತ್ತೆ ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಯತೀಂದ್ರ ಬಚ್ಚಾ.. ಇಂಜಕ್ಷನ್ ಮೆಡಿಸನ್ ಕೊಟ್ಟು ಸುಮ್ಮನಿರಬೇಕು. ಹಿಂದೂಗಳ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ನಿನಗೆ ಎಂದು ಗುಡುಗಿದ್ದಾರೆ.

ನೀವು ಟಾರ್ಗೆಟ್ ಮಾಡಿರೋದು ಹಿಂದೂಗಳನ್ನ, ರಾಮಭಕ್ತರನ್ನ. ಈ ಹಿಂದೆ ಯಾಕೆ ಅರೆಸ್ಟ್ ಮಾಡಿಲ್ಲ..? ಕಾಂಗ್ರೆಸ್ ನವರು ರಾವಣನ ಕೆಲಸ ಮಾಡ್ತೀದಿರಿ. ನಿಮ್ಮದು ರಾವಣನ ಅವತಾರ. ಯಾವ ತಾಕತ್ತೂ ಇದನ್ನು ತಡೆಯೋಕೆ ಸಾಧ್ಯ ಇಲ್ಲ. ಹಿಂದೂ ರಾಷ್ಟ್ರ ಆದ್ಮೇಲೆ ಯಾವ ಗಲಭೆ ಆಗಲ್ಲ‌. ಇದಕ್ಕೆ ಹಿಂದೂ ರಾಷ್ಟ್ರ ಆಗಲೇಬೇಕು ಎಂದು ಹೇಳಿದ್ದಾರೆ.

ಕೋಟಿ ಜನ ಗೋಧ್ರಾಕ್ಕೆ ಹೋಗ್ತಿವಿ

ಶ್ರೀಕಾಂತ್ ಪೂಜಾರಿ ವಿಚಾರಕ್ಕೆ ನಾನು ವಕೀಲರನ್ನ ಭೇಟಿಯಾಗ್ತೀನಿ. ಹೈಕೋರ್ಟ್ ನಲ್ಲಿ ಸ್ಟೇ ತರೋ ಪ್ರಯತ್ನ ಮಾಡ್ತೀವಿ. ದೇಶ ರಾಮ ಮಯ ಆಗ್ತಿದೆ, ಈ ಕಾರಣಕ್ಕೆ ಇವರು ಕೆಡಿಸೋಕೆ ಹೊರಟ್ಟಿದ್ದಾರೆ. ಶ್ರೀಕಾಂತ್ ಪೂಜಾರಿ ಮೇಲಿರೋ ಕೇಸ್ ದಾರಿ ತಪ್ಪಿಸೋ ಕೆಲಸ ಆಗ್ತಿದೆ. ನಿಮ್ಮ ತಲೆ ಮೇಲೆ ಬಂದ ನಾಟಕ ಬಿಟ್ಟು ಬಿಡಿ. ಕೋಟಿ ಜನ ನಾವು ಗೋಧ್ರಾಕ್ಕೆ ಹೋಗ್ತಿವಿ, ನಿಮಗೆ ತಾಕತ್ ಇದ್ರೆ ತಡೀರಿ ಎಂದು ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.

RELATED ARTICLES

Related Articles

TRENDING ARTICLES