ಬೆಂಗಳೂರು : ಅಯೋಧ್ಯ ರಾಮಮಂದಿರ ಲೋಕಾರ್ಪಣೆಗೆ ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದ ಬಿಜೆಪಿ ವಿರುದ್ದ ಶಾಸಕ ಹೆಚ್.ಸಿ. ಬಾಲಕೃಷ್ಣ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರಿ ಕಾರ್ಯಕ್ರಮನಾ? ಅಥವಾ ಖಾಸಗಿ ಕಾರ್ಯಕ್ರಮವಾ? ಅಂತ ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದು. ಹಿಂದೂಗಳ ಮುಂದೆ ನಮ್ಮನ್ನ ವಿಲನ್ ಮಾಡಲು ಆಹ್ವಾನ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಬರದಿದ್ದರೆ ನಮಗೆ ಅನುಕೂಲ ಆಗುತ್ತೆ ಅಂತ ಅಂದುಕೊಂಡಿದ್ದಾರೆ. ಯಾರು ಆಯೋಜನೆ ಮಾಡಿದ್ದಾರೆ ಸ್ಪಷ್ಟ ಪಡಿಸಬೇಕಲ್ವಾ? ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ನಾನೂ ರಾಮ ಭಕ್ತ, ರಾಮನನ್ನ ಮನೆ ದೇವರು ಅಂತ ಪೂಜಿಸ್ತೇನೆ : ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್
ಬಸವಣ್ಣ ಮಾತನ್ನ ನಾವು ಪಾಲಿಸಬೇಕಲ್ವಾ?
ನರೇಂದ್ರ ಮೋದಿಯವರನ್ನೂ ಆಹ್ವಾನಿತರಾಗಿ ಕರೆದಿದ್ರೆ ನಾವು ಹೋಗ್ತಿದ್ವಿ. ಬಸವಣ್ಣ ಕಲ್ಲು ಪೂಜೆ ಯಾಕೆ ಮಾಡ್ತೀರಿ ಅಂತ ಹೇಳಿದ್ರು. ಬಸವಣ್ಣ ಮಾತನ್ನ ನಾವು ಪಾಲಿಸಬೇಕಲ್ವಾ? ಎಂದು ಮೂರ್ತಿ ಪೂಜೆ ಬಗ್ಗೆ ಹೆಚ್.ಸಿ. ಬಾಲಕೃಷ್ಣ ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.