Sunday, January 19, 2025

ಲೋಕಸಭಾ ಚುನಾವಣೆ; ಪ್ರಹ್ಲಾದ್​ ಜೋಶಿ ಬದಲು ಶ್ರೀಕಾಂತ್​ಗೆ ಟಿಕೇಟ್​ ನೀಡುವಂತೆ ಸವಾಲ್!

ಬೆಂಗಳೂರು: ಹಿಂದು ಕರಸೇವಕ ಶ್ರೀಕಾಂತ್​ ಪೂಜಾರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಷಿ ಬದಲು ಟಿಕೇಟ್ ನೀಡುವಂತೆ ಬಿಜೆಪಿಗೆ ರಾಜ್ಯ ಕಾಂಗ್ರೆಸ್​ ಸವಾಲೆಸೆದಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ ಬರೆದುಕೊಂಡಿದ್ದು, ‘ಶ್ರೀಕಾಂತ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್​ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ. ಹೊಸ ಪ್ರತಿಭೆಯನ್ನು ಪರಿಚಯಿಸಲಿ’ ಎಂದು ಹೇಳಿದೆ.

‘ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

‘ಕ್ರಿಮಿನಲ್‌ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್‌ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.

 

RELATED ARTICLES

Related Articles

TRENDING ARTICLES