Wednesday, January 22, 2025

ಯಶ್ ‘ಟಾಕ್ಸಿಕ್’ನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್?

ಬೆಂಗಳೂರು : ‘ಕೆಜಿಎಫ್’ ನಂತರ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ಯಶ್​​ ಮುಂದಿನ ಸಿನಿಮಾ ಟಾಕ್ಸಿನ್​​​​ನಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ. ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರಂತೆ.

ಕರೀನಾ ಅವರು ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋ ಬೈಟ್ ಅನ್ನು ಅನಾವರಣಗೊಳಿಸಲಾಗಿದೆ.

RELATED ARTICLES

Related Articles

TRENDING ARTICLES