Thursday, January 23, 2025

ಡ್ರೋನ್ ಪ್ರತಾಪ್​ ಗೆ ಡಾಕ್ಟರ್ ಪ್ರತಾಪ್ ಚಿಕಿತ್ಸೆ​!

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿರುವ ಡ್ರೋನ್ ಪ್ರತಾಪ್​ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಇದೀಗ ಬಿಗ್ ಮನೆಯಲ್ಲಿರುವಾಗಲೇ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರು ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದಾರೆ ಎಂದು ಹಲವು ಮಾದ್ಯಮಗಳು ಹಾಗು ಮೂಲಗಳು ತಿಳಿಸಿದ್ದವು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಂಬಳಗೋಡು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಲಕ್ಷದ್ವೀಪದ ಕಡಲ ತೀರದಲ್ಲಿ ಪ್ರಧಾನಿ ಮೋದಿ ರಿಲಾಕ್ಸ್​ ​​! ಫೋಟೊ ವೈರಲ್​

ಈ ಪ್ರಕರಣದ ಕುರಿತು ಡ್ರೋನ್ ಪ್ರತಾಪ್​ ಗೆ ಚಿಕಿತ್ಸೆ ನೀಡಿದ್ದ ವೈದ್ಯ ಪ್ರತಾಪ್​ ಪ್ರತಿಕ್ರಿಯೆ ನೀಡಿ, ಜನವರಿ 3 ರಂದು ಬಿಗ್ ಬಾಸ್​ ಸ್ಪರ್ಧಿ ಪ್ರತಾಪ್ ಅಸ್ವಸ್ತಗೊಂಡು ಆಸ್ಪತ್ರೆಗೆ ಬಂದಿದ್ದರು, ಇವರು ಲೂಸ್ ಮೋಶನ್, ವಾಮಿಟಿಂಗ್ ತೊಂದರೇ ಅನುಭವಿಸುತ್ತಿದ್ದರು. ಸದ್ಯ ಇವರ ಆರೋಗ್ಯ ಸುಧಾರಿಸಿದ ಹಿನ್ನೆಲೆ ಇಂದು ಮಧ್ಯಾಹ್ನ 1 ಘಂಟೆ ಸುಮಾರಿಗೆ ಡಿಸ್ಚಾರ್ಜ್ ಆಗಿದ್ದಾರೆ.

ಫುಡ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದ ಪ್ರತಾಪ್ ದೇಹದಲ್ಲಿ ವಿಟಮಿನ್ ಟ್ಯಾಬ್ಲೆಟ್​ ತಗೊಂಡಿರೋ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಊಟ ಮಾಡದೇ ಇರೋದೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES