Wednesday, January 22, 2025

ಎದೆಗೆ ಗುಂಡು ಹಾರಿಸಿಕೊಂಡು BE ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೆಂಗಳೂರು : ವಿದ್ಯಾರ್ಥಿಯೋರ್ವ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರದಲ್ಲಿ ನಡೆದಿದೆ.

ಕೊಡಗು ಮೂಲದ ವಿಶು ಉತ್ತಪ್ಪ ನಿನ್ನ ಸಂಜೆ ಸುಮಾರಿಗೆ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಿಂದ ಹೊರ ಹೋಗಿದ್ದ ಪೋಷಕರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಒಂದು ಗಂಟೆ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿಶು ಉತ್ತಪ್ಪ ಸಾವನ್ನಪ್ಪಿದ್ದಾನೆ.

ಈತ ಬೆಂಗಳೂರಿನ RR ಕಾಲೇಜಿನಲ್ಲಿ BE ಫಸ್ಟ್ ಇಯರ್ ವ್ಯಾಸಂಗ ಮಾಡ್ತಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೊಬೈಲ್​ ಫೋನ್ ವಶಕ್ಕೆ ಪಡೆದು ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಿಶು ತಂದೆ ರವಿ ತಿಮ್ಮಯ್ಯ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌ ಮಾಡ್ತಿದ್ರು. ತಂದೆಯ ಲೈಸೆನ್ಸ್ ಹೊಂದಿರುವ ಡಬ್ಬಲ್ ಬ್ಯಾರಲ್ ಗನ್​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

RELATED ARTICLES

Related Articles

TRENDING ARTICLES