Thursday, January 23, 2025

ನೆಲಮಂಗಲ ತಲುಪಿದ ಅತಿಥಿ ಉಪನ್ಯಾಸಕರ ಪಾದಯಾತ್ರೆ

ದಾಬಸ್‌ ಪೇಟೆ: ಸರ್ಕಾರ ನೀಡಿದ ಭರವಸೆಗಳನ್ನು ತಿರಸ್ಕರಿಸಿ, ಸೇವಾ ಭದ್ರತೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪಾದಯಾತ್ರೆ ಹಮ್ಮಿಕೊಂಡಿರುವ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರ ದಾಬಸ್ ಪೇಟೆ ಪಟ್ಟಣದಿಂದ ಹೊರಟು ನೆಲಮಂಗಲ ತಲುಪಿದರು.

ತುಮಕೂರಿನ ಸಿದ್ದಗಂಗಾ ಮಠದಿಂದ ಆರಂಭವಾದ ಪಾದಯಾತ್ರೆ ರಾಷ್ಟ್ರೀಯ ಹೆದ್ದಾರಿ 48ರ ಮೂಲಕ 20 ಕಿ.ಮೀ. ಸಾಗಿ ರಾತ್ರಿ ದಾಬಸ್ ಪೇಟೆ ತಲುಪಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ರಾತ್ರಿ ಪಟ್ಟಣದ ಬಸವಶ್ರೀ ಕಲ್ಯಾಣ ಮಂಟಪದಲ್ಲಿ ತಂಗಿದ್ದು, ಮಂಗಳವಾರ ಬೆಳಿಗ್ಗೆ ಇಲ್ಲಿಂದ ಬೆಂಗಳೂರಿನತ್ತ ಹೊರಟರು.

ಇದನ್ನೂ ಓದಿ: Love Marriage: ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಮ್ಯಾರೇಜ್​ ಆದ ಪ್ರೀಮಿಗಳು

ರಸ್ತೆಯುದ್ದಕ್ಕೂ ಭಿತ್ತಿಪತ್ರಗಳನ್ನು ಹಿಡಿದು ಸಾಗಿದರು. ‘ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಕಳೆದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು, ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಕಾಯಂಗೊಳಿಸುತ್ತಿಲ್ಲ’ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದರು.

‘ನಮ್ಮದು ಹಸಿವಿನ ಹೋರಾಟ, ಅತಿಥಿ ಉಪನ್ಯಾಸಕರ ಪರಿಸ್ಥಿತಿ ಅರಿತು ಅದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು. ಪಾದಯಾತ್ರೆಯಿಂದ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ವಾಹನದಟ್ಟಣೆ ಉಂಟಾಗಿತು.

 

RELATED ARTICLES

Related Articles

TRENDING ARTICLES