ಬೆಂಗಳೂರು : W, W, W, W, W, W.. ಎರಡು ಓವರ್ನಲ್ಲಿ 0 ರನ್ಗೆ 6 ವಿಕೆಟ್. ಹರಿಣಗಳ ತೂಫಾನ್ ದಾಳಿಗೆ ಭಾರತದ ಬ್ಯಾಟರ್ಗಳ ಪೆವಿಲಿಯನ್ ಪೆರೇಡ್..!
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 153 ರನ್ಗಳಿಗೆ ಆಲೌಟ್ ಆಗಿದೆ. ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್ನಲ್ಲಿ 55 ರನ್ಗಳಿಗೆ ಆಲೌಟ್ ಆಯಿತು.
56 ರನ್ಗಳ ಗುರಿ ಬೆನ್ನತ್ತಿದ ಭಾರತ 153 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 98 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಟೀ ಬ್ರೇಕ್ ಬಳಿಕ ಭಾರತದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾ ಬೌಲರ್ಗಳ ಮಾರಕ ದಾಳಿಗೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪೆರೇಡ್ ನಡೆಸಿದರು.
6 ಮಂದಿ ಶೂನ್ಯಕ್ಕೆ ಔಟ್
ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ 46 ರನ್ಗಳಿಗೆ ಔಟಾದರು. ನಾಯಕ ರೋಹಿತ್ ಶರ್ಮಾ 39, ಶುಭ್ಮನ್ ಗಿಲ್ 36, ರಾಹುಲ್ 8 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಶೂನ್ಯ(0)ಕ್ಕೆ ಔಟಾದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 3, ನಂದ್ರೆ ಬರ್ಗರ್ 3 ಹಾಗೂ ಲುಂಗಿ ಎನ್ಗಿಡಿ 3 ವಿಕೆಟ್ ಪಡೆದು ಮಿಂಚಿದರು.
Innings Break!
India are bowled out for 153 runs in the first innings, with a lead of 98 runs.
Scorecard – https://t.co/j9tTnGLuBP #SAvIND pic.twitter.com/F942A4AIMY
— BCCI (@BCCI) January 3, 2024