Wednesday, January 22, 2025

Kidnap Case: ಭಿಕ್ಷೆ ಬೇಡುತ್ತಿದ್ದ ಬಾಲಕಿ ಕಿಡ್ನಾಪ್;‌ ಸಿಕ್ಕಿಬಿದ್ದ ದುಷ್ಕರ್ಮಿಗಳು

ಚಾಮರಾಜನಗರ: ನಾಲ್ವರು ಕಾಮಾಂಧ ಮುಸ್ಲಿಂ ಯುವಕರು ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳನ್ನು  ಅಪಹರಿಸಿ ಕೊನೆಗೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಭಯಾನಕ ಘಟನೆಯೊಂದು ಕೊಳ್ಳೇಗಾಲ ನಗರದಲ್ಲಿ ನಡೆದಿದೆ.

ಈ ಕಿರಾತಕರು ಕೇರಳದ ಮಲಪ್ಪುರಂ ಜಿಲ್ಲೆಯವರೆಂದು ತಿಳಿದುಬಂದಿದ್ದು, ಮಾರ್ಗ ಮಧ್ಯೆ ಸ್ಥಳೀಯರು ತಡೆದು ಚೆನ್ನಾಗಿ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕೇರಳದ ಮಲಪ್ಪುರಂನ ಈ ದುಷ್ಟರು ಪ್ರವಾಸಕ್ಕೆಂದು ಚಾಮರಾಜ ನಗರದಿಂದ ತಮಿಳುನಾಡಿಗೆ ಹೊರಟಿದ್ದರು. ದಾರಿ ಮಧ್ಯೆ ಅವರಿಗೆ ಕೊಳ್ಳೇಗಾಲದಲ್ಲಿ ಅಮಾಯಕಿಯಂತಿದ್ದ, ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳು ಕಂಡಿದ್ದಾಳೆ. ಆಕೆಯ ಮೇಲೆ ಮೇಲೆ ಕಣ್ಣು ಹಾಕಿದ ದುಷ್ಟರು ಆಕೆಯನ್ನು ಯಾರಿಗೂ ಗೊತ್ತಾಗದಂತೆ ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.

ಘಟನೆಯ ವಿವರ

ನಾಲ್ವರು ಮುಸ್ಲಿಂ ಯುವಕರು ಹೀಗೆ ಬಾಲಕಿಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕವೂ ಕಾರು ಪರಾರಿ ಆಗಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಬಾಲಕಿ ಇರುವುದು ಪತ್ತೆಯಾಗಿದೆ. ವಿಚಾರಿಸಿದಾಗ ಬಾಲಕಿಯನ್ನು ಅಪಹರಿಸಿರುವುದು ಗೊತ್ತಾಗಿದೆ. ಆಗ ಊರಿನವರು ಸೇರಿ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿ ನರಸೀಪುರ ಮೂಲದವಳಾಗಿದ್ದು, ಕೊಳ್ಳೇಗಾಲದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದಳು. ಇದೀಗ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ರಿಮ್ಯಾಂಡ್‌ ಹೋಮ್‌ಗೆ ಕಳಹಿಸಿದ್ದಾರೆ.

ಅಪಹರಣಕ್ಕೆ ಯತ್ನಿಸಿದ ಕೇರಳದ ಮಲಪ್ಪುರಂ ಜಿಲ್ಲೆಯ ಈ ಕಿರಾತಕ ಯುವಕರನ್ನು ಆದಿಲ್. ಅಯೂಬ್ ಸಾದಿಕ್. ಉಮರ್ ಎಂದು ಗುರುತಿಸಲಾಗಿದೆ. ಇವರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES