Monday, December 23, 2024

ಶ್ರೀರಾಮನ ಹೆಸರು ಇಟ್ಟುಕೊಂಡಿರುವ ಸಿದ್ದರಾಮಯ್ಯಗೆ ಒಳ್ಳೆಯದಾಗಲಿ : ಸುಬುಧೇಂದ್ರ ತೀರ್ಥ ಸ್ವಾಮಿ

ರಾಯಚೂರು : ಶ್ರೀರಾಮನ ಹೆಸರು ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಒಳ್ಳೆಯದಾಗಲಿ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯರನ್ನ ರಾಮನಿಗೆ ಹೋಲಿಕೆ ಮಾಡಿರುವ ವಿಚಾರಕ್ಕೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ ನಾನು ಗಮನಿಸಿಲ್ಲ ಎಂದು ತಿಳಿಸಿದ್ದಾರೆ.

ರಾಮನ ಹೋಲಿಕೆಯನ್ನು ಇನ್ನೊಬ್ಬರಿಗೆ ಹೋಲಿಸುವಂತದ್ದಲ್ಲ. ಶ್ರೀರಾಮನ ಹೆಸರನ್ನ ಸಿಎಂ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಶ್ರೀರಾಮನ ಆದರ್ಶ ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನವರು ಸಹ ಪಡೆಯಲಿ. ಅವರಿಗೂ ನಾವು ಅಭಿನಂದಿಸೋಣ ಎಂದು ಹೇಳಿದ್ದಾರೆ.

ದೃಷ್ಟಾಂತ ಎಲ್ಲರೂ ಕೊಡುತ್ತಾರೆ

ಶ್ರೀರಾಮ ಎಲ್ಲ ರೀತಿಯಿಂದಲೂ ಅನುಕರಣೀಯ ಹಾಗೂ ಆದರ್ಶ ವ್ಯಕ್ತಿ. ಶಾಸ್ತ್ರದಲ್ಲಿ ಒಂದು ಮಾತು ಹೇಳ್ತಾರೆ. ‘ರಾಮಾದಿವದ್ ವರ್ಧಿತಂ ನಾ ರಾವಣಾದಿವತ್ ವರ್ಧಿತಂ’. ನೀನು ಹೇಗಿರಬೇಕು ಅಂತ ಹೇಳುವಾಗ ರಾಮನಂತೆ ನೀನು ಇರು ಅಂತ ದೃಷ್ಟಾಂತ ಎಲ್ಲರೂ ಕೊಡುತ್ತಾರೆ. ಯಾರೊಂದಿಗೂ ಹೋಲಿಕೆ ಸರಿಯಲ್ಲ, ಸಿದ್ದರಾಮಯ್ಯನವರಿಗೂ ಒಳ್ಳೆಯದಾಗಲಿ ಎಂದು ಸುಬುಧೇಂದ್ರ ತೀರ್ಥ ಸ್ವಾಮಿ ನುಡಿದಿದ್ದಾರೆ.

RELATED ARTICLES

Related Articles

TRENDING ARTICLES