Thursday, December 26, 2024

ಸಿನಿತಾರೆಯರ ನ್ಯೂ ಇಯರ್​ ಸಖತ್ ಸೆಲೆಬ್ರೇಷನ್!

ಫಿಲ್ಮಿ ಡೆಸ್ಕ್​: ಹೊಸ ವರ್ಷ ಅಂದ್ರೆ ಸಂಭ್ರಮ-ಸೆಲೆಬ್ರೇಷನ್. ನಮ್ಮ ಸಿನಿಮಾ ತಾರೆಯರು ಕೂಡ ಈ   ಸಾರಿ ಭರ್ಜರಿಯಾಗಿ ಪಾರ್ಟಿ ಮಾಡ್ತಾ ನ್ಯೂ ಇಯರ್​ನ ವೆಲ್​ಕಮ್ ಮಾಡಿದ್ದಾರೆ. ಯಾವೆಲ್ಲಾ ಸಿನಿ ಸೆಲೆಬ್ರಿಟೀಸ್ ಹೊಸ ವರ್ಷವನ್ನ ಹೇಗೆಲ್ಲಾ ವೆಲ್​ಕಮ್ ಮಾಡಿದ್ರು ಅನ್ನೋದನ್ನ ಈ ವರದಿಯಲ್ಲಿ ನೋಡೋಣ.

ಜಗತ್ತಿನೆಲ್ಲೆಡೆ ಹೊಸ ವರ್ಷವನ್ನ ಸಂಭ್ರಮದಿಂದ ಸ್ವಾಗತಿಸಲಾಗಿದೆ. ನಮ್ಮ ಸಿನಿತಾರೆಯರು ಕೂಡ ಹೊಸ ವರ್ಷಾಚರಣೆಯನ್ನ ಭರ್ಜರಿಯಾಗಿ ಮಾಡಿದ್ದಾರೆ. ಅನೇಕರು ಹೊಸ ವರ್ಷಕ್ಕೆ ಫ್ಯಾನ್ಸ್​ಗೆ ಗುಡ್​​ನ್ಯೂಸ್​​ಗಳನ್ನ ಕೂಡ ಕೊಟ್ಟಿದ್ದಾರೆ. ನಮ್ಮ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳ ಬಗ್ಗೆ ಹೇಳೋದಾದ್ರೆ  ರಾಕಿಂಗ್ ಸ್ಟಾರ್ ಯಶ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಫ್ಯಾಮಿಲಿ ಪೋಟೋ ಹಂಚಿಕೊಂಡು ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಅಂತ ವಿಶ್ ಮಾಡಿದ್ದಾರೆ.

ಇನ್ನೂ, ರಿಯಲ್ ಉಪ್ಪಿ ಅಂಡ್ ಪ್ರಿಯಾಂಕ ತಮ್ಮದೇ ರೆಸಾರ್ಟ್​​ನಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಉಪ್ಪಿ ಸೋದರ ಸುಧೀಂದ್ರ, ನಿರ್ದೇಶಕ ಮುರುಳಿ ಮೋಹನ್ ಸೇರಿದಂತೆ ಅನೇಕರು ಈ ಸಂತೋಷಕೂಟದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ದೇವರ ವಿಗ್ರಹಗಳ ಕದ್ದು ಕಳ್ಳಸಾಗಾಟ: ವಾಹನ ಪೊಲೀಸರ ವಶಕ್ಕೆ!

ನಿಖಿಲ್ ಕುಮಾರ್​ಸ್ವಾಮಿ ತಮ್ಮ ಪತ್ನಿ ರೇವತಿ ಜೊತೆಗೆ ವಿದೇಶ ಪ್ರವಾಸದಲ್ಲಿದ್ದು ನೆದರ್​ಲ್ಯಾಂಡ್ ನ ಸುಂದರ ತಾಣಗಳಲ್ಲಿ ವರ್ಷಾರಂಭ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಲ್ಲಿನ ಫೋಟೋಗಳನ್ನ ಶೇರ್ ಮಾಡಿ ಅಭಿಮಾನಿಗಳಿಗೆ ಹೊಸ ವರ್ಷದ ವಿಶಸ್ ಹೇಳಿದ್ದಾರೆ.

ಇನ್ನೂ  ಅದಿತಿ ಪ್ರಭುದೇವ ಹೊಸ ವರ್ಷದ ವಿಶಸ್ ಜೊತೆಗೆ ಒಂದು ಖುಷಿಯ ವಿಚಾರವನ್ನ ಹಂಚಿಕೊಂಡಿದ್ದಾರೆ. ತಾವು ತಾಯಿಯಾಗ್ತಾ ಇದ್ದು ಈ ವರ್ಷ ತಮ್ಮ ಪಾಲಿಗೆ ಬಹಳನೇ ಸ್ಪೆಷಲ್ ಅನ್ನೋ ಸಂಗತಿಯನ್ನ ಶೇರ್ ಮಾಡಿದ್ದಾರೆ.

ಇನ್ನೂ  ಕರೀನಾ ಕಪೂರ್ ಸೈಫ್ ಅಲಿಖಾನ್ ಕೂಡ ತಮ್ಮ ಬಂಗಲೆಯಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ. ಕರೀನಾ ತಮ್ಮ ಸೋಷಿಯಲ್ ಖಾತೆಯಲ್ಲಿ ಸೆಲೆಬ್ರೇಷನ್​ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ.

ಪತ್ನಿ ನತಾಶಾ  ಜೊತೆಗೆ ವಿದೇಶ ಪ್ರವಾಸದಲ್ಲಿರೋ ವರುಣ್ ಧವನ್ ಅಲ್ಲಿನ ಫೈರ್ ವರ್ಕ್ ವಿಡಿಯೊನ ಸೋಷಿಯಲ್ ಮಿಡಿಯಾದಲ್ಲಿ ಹಾಕಿ ಫ್ಯಾನ್ಸ್ ಗೆ ನ್ಯೂ ಇಯರ್ ವಿಶಸ್ ಹೇಳಿದ್ದಾರೆ. ಕಂಗನಾ ರಣೌತ್ ಫ್ಯಾಮಿಲಿ ಜೊತೆಗೆ ಪಾರ್ಟಿ ಸೆಲೆಬ್ರೇಟ್ ಮಾಡಿದ್ದು, ಪೋಟೊಗಳನ್ನ ಹಂಚಿಕೊಂಡು ಫ್ಯಾನ್ಸ್​ಗೆ ವಿಶ್ ಮಾಡಿದ್ದಾರೆ. ಇನ್ನೂ ದುಬೈನಲ್ಲಿರೋ ಸಮಂತಾ ಅಲ್ಲಿನ ಸೆಲೆಬ್ರೇಷನ್ ಜೊತೆಗೆ ಪೋಸ್ ಕೊಟ್ಟು ಮಸ್ತ್ ಆಗಿರೋ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.

ಒಟ್ಟಾರೆ ಹೊಸ ವರ್ಷ ಗ್ರ್ಯಾಂಡ್ ಆಗಿ ಸ್ವಾಗತಿಸಿರೋ ಈ ತಾರೆಯರೆಲ್ಲಾ ತಮ್ಮದೇ ಸ್ಟೈಲ್​ನಲ್ಲೀ ಅಭಿಮಾನಿಗಳಿಗೆ ನ್ಯೂ ಇಯರ್ ವಿಶಸ್ ಹೇಳಿದ್ದಾರೆ. ಆ ಮೂಲಕ ಹೊಸ ವರ್ಷದ ಸೆಲೆಬ್ರೇಷನ್ ರಂಗು ಹೆಚ್ಚಿಸಿದ್ದಾರೆ.

RELATED ARTICLES

Related Articles

TRENDING ARTICLES