Wednesday, January 22, 2025

ರಾಮನೂರಿನ ಗುಡಿಯನು ‘ಮೈಸೂರಿನ ಬಾಲರಾಮ’ ಬೆಳಗುವನು : ವಿಜಯೇಂದ್ರ

ಬೆಂಗಳೂರು : ಶ್ರೀರಾಮ ಹಾಗೂ ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ. ಇದೀಗ ರಾಮನೂರಿನ ಗುಡಿಯನು ಮೈಸೂರಿನ ಬಾಲರಾಮನು ಬೆಳಗುವನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಬಾಲರಾಮನ ಮೂರ್ತಿ ಮೂಡಿದೆ. ಈ ಮೂರ್ತಿ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ, ಕರುನಾಡ ಹೆಮ್ಮೆಯಾಗಿದೆ ಎಂದು ಹೇಳಿದ್ದಾರೆ.

ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ ಎಂದು ತಿಳಿಸಿದ್ದಾರೆ.

ವಿಶ್ವ ಹಿಂದೂಗಳ ಹೃದಯದಲ್ಲಿ ಬಾಲರಾಮ

ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯರ ಮೂರ್ತಿ. ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್ರ ಮೂರ್ತಿ. ಇದೀಗ ವಿಶ್ವ ಹಿಂದೂಗಳ ಹೃದಯದಲ್ಲಿ ನೆಲೆಸಲಿರುವ ಅಯೋಧ್ಯೆಯ ಬಾಲರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಈ ಕಾರ್ಯದಲ್ಲಿ ಹೆಗಲುಕೊಟ್ಟ ಅವರ ತಂಡದವರಿಗೆ ವಿಜಯೇಂದ್ರ ಅಭಿನಂದನೆ ಹೇಳಿದ್ದಾರೆ.

RELATED ARTICLES

Related Articles

TRENDING ARTICLES