ಮಂಡ್ಯ : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಮೇಲೆ ದ್ವೇಷ ಕಾರುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 31 ವರ್ಷಗಳ ಹಿಂದೆ ನಡೆದ ಘಟನೆ ಸಂಬಂಧ ಹಿಂದೂ ಕಾರ್ಯಕರ್ತರ (ಕರಸೇವಕರು) ಬಂಧನ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡಿದೆ. 31 ವರ್ಷ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅವನು ಎಲ್ಲಿ ಓಡಿ ಹೋಗಿಲ್ಲ. ಬೇರೆ ಕೇಸ್ನಲ್ಲಿ ಭಾಗಿಯಾಗಿಲ್ಲ. ಆಟೋ ಓಡಿಸಿಕೊಂಡಿದ್ದ ವ್ಯಕ್ತಿಯನ್ನ 31 ವರ್ಷದ ನಂತರ ಯಾಕೆ ಬಂಧಿಸಿದ್ದೀರಿ ಎಂದು ಸರ್ಕಾರ ಸ್ವಷ್ಪಿಕರಣಕೊಡಬೇಕು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಪೊಲೀಸರನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಿಂದೂ ವಿರೋಧಿ ಧ್ವೇಷ ಭಾವನೆ ಮೊದಲು ನಿಲ್ಲಿಸಲಿ. ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಸಾವಿರಾರು ಅಲ್ಪಸಂಖ್ಯಾತರು ಭಾಗಿಯಾಗಿದ್ರು
ಮೂರು ವರ್ಷಗಳ ಕೆಳಗೆ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿತ್ತು. ಅಲ್ಪಸಂಖ್ಯಾತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಆಗ ಬಿಜೆಪಿ ಸರ್ಕಾರ 250 ಜನರನ್ನ ಬಂಧಿಸುವ ಕೆಲಸ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಲ್ಲಿ ಗಲಭೆಯಲ್ಲಿ ಭಾಗಿಯಾದವರನ್ನ ಬಿಡುಗಡೆ ಮಾಡಬೇಕು ಎಂದು ಪತ್ರ ಬರೆಯುತ್ತಾರೆ. ಜೈಲಿನಲ್ಲಿ ಇರುವ ಗಲಭೆಕೋರರನ್ನು ಬಿಡಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಮಹೇಶ್ ಟೆಂಗಿನಕಾಯಿ ಆರೋಪ ಮಾಡಿದ್ದಾರೆ.